ಯುಗಾದಿ ಹಬ್ಬದ ಪ್ರಯುಕ್ತ ನಗರದ ಮಾವಳ್ಳಿಯಲ್ಲಿ ನೆಲಸಿರುವ ಶ್ರೀ ಮಾರಮ್ಮ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಆಗಮಿಸಿ ಶ್ರೀ ಮಾರಮ್ಮ ದೇವಿಗೆ ಅರಿಸಿನ, ಕುಂಕುಮ ಮತ್ತು ನೀರಿನ ಅಭಿಷೇಕ ಮಾಡಿ ದೇವಿಯ ದರ್ಶನ ಪಡೆದರು.