ಬೀದರ್: ಜಿಲ್ಲಾಧಿಕಾರಿ  ರಾಮಚಂದ್ರನ್ .ಆರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಹಾಗೂ ಜಿಲ್ಲಾ ನ್ಯಾಯಾಲಯ ಮತ್ತು ತಹಸೀಲ್ ಕಚೇರಿ ಎದುರಿನ ರಸ್ತೆಯಲ್ಲಿ ಸಂಚರಿಸಿ ಮಾಸ್ಕ್ ಧರಿಸದೇ ಇರುವವರನ್ನು ತಡೆದು, ಮಾಸ್ಕ್ ನೀಡಿ ಜಾಗೃತಿ ಮೂಡಿಸಿದರು. ಮಾಸ್ಕ ಧರಿಸದೇ ಇರುವವರಿಗೆ ಸ್ಥಳದಲ್ಲೇ ದಂಡ ವಿದಿಸಿ ಎಚ್ಚರಿಕೆ ನೀಡಲಾಯಿತು.