ಸಿಂಧನೂರು.‌ನ.09- ಕರ್ತವ್ಯ ನಿರತ ಮಹಿಳಾ ಅಧಿಕಾರಿ ‌ಮೇಲೆ ಸ್ತ್ರೀ ಶಕ್ತಿ ಒಕ್ಕೂಟದ ಅದ್ಯಕ್ಷೆ ಶ್ರೀದೇವಿ ಹಲ್ಲೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕಲ್ಯಾಣ ಕರ್ನಾಟಕ ‌ರಕ್ಷಣಾ ವೇದಿಕೆ ,ಸಿಂಧನೂರು ಮಹಿಳಾ ವೇದಿಕೆ ನಗರದಲ್ಲಿ ‌ಪ್ರತ್ಯೇಕವಾಗಿ ಪ್ರತಿಭಟನೆಗಳನ್ನು ‌ನಡೆಸಿ ತಹಶಿಲ್ದಾರರು ಹಾಗೂ ತಾ.ಪ‌ ಇಒ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ‌ಪತ್ರ ಸಲ್ಲಿಸಿದರು.
ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಇಲಾಖೆಯ ‌ಸಹಾಯಕ ಶಿಶು ಅಭಿಮಾನಿಗಳು ‌ಯೋಜನಾಧಿಕಾರಿ ಯೋಗಿತಾಬಾಯಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ಒಕ್ಕೂಟಕ್ಕೆ ಕಛೇರಿಗೆ ಹೋಗಿ‌ ದಾಖಲಾತಿಗಳ್ನು ಕೊಡಿ ಎಂದಿದ್ದಕ್ಕೆ ಒಕ್ಕೂಟದ ಅದ್ಯಕ್ಷೆ ಶ್ರೀದೇವಿ ದಾಖಲಾತಿ ಗಳನ್ನು ಕಛೇರಿಯಿಂದ ಎಸೆದಿದ್ದು ಚಲ್ಲಾಪಿಲ್ಲಿಯಾದ ದಾಖಲಾತಿ ಗಳನ್ನು ಯೋಗಿತಾಬಾಯಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಹೋದಾಗ ಶ್ರೀದೇವಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದನ್ನು ಸಂಘಟನೆಗಳು ತೀವ್ರವಾಗಿ ಖಂಡಿಸಿ ಆಕೆಯನ್ನು ಬಂಧಿಸಿ‌ ಹಾಗೂ ಅಧಿಕಾರಿಗೆ ರಕ್ಷಣೆ‌ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆದಾಗ ಸ್ಥಳದಲ್ಲಿದ್ದ ಸಿಡಿಪಿಒ ಸುದೀಪ ಹಾಗೂ ಅಶೋಕ ಹಾಗೂ ಕಛೇರಿಯ ಸಿಬ್ಬಂದಿಗಳು ಸ್ಥಳದಲ್ಲಿದ್ದು ಅಧಿಕಾರಿಗೆ ರಕ್ಷಣೆ ನೀಡದೆ ಮೌನ ವಹಿಸಿರುವದು ನೋಡಿದರೆ ಶ್ರೀದೇವಿ ಜೊತೆ ಸದ್ರಿ ಅಧಿಕಾರಿಗಳು ಶಾಮಿಲಾಗಿರುವದು ಮೇಲ್ನೋಟಕ್ಕೆ ಕಂಡುಬರುತ್ತದೆ.ಇಂದು‌ ಯೋಗಿತಾಬಾಯಿ ಮೇಲೆ ಹಲ್ಲೆ ‌ಮಾಡಿದ ಶ್ರೀದೇವಿ ,ಮುಂದೆ ನಮ್ಮ ‌ಹಲ್ಲೆ‌ ಮಾಡಬಹುದೆಂಬ ಸಾಮಾನ್ಯ ಜ್ಞಾನ ಈ‌ ಅಧಿಕಾರಿಗಳಿಗಿಲ್ಲ.ಯೋಗಿತಾಬಾಯಿ ಮೇಲೆ ಹಲ್ಲೆಗೆ ಪರೋಕ್ಷವಾಗಿ ಅಧಿಕಾರಿಗಳೆ ನೇರ ಕಾರಣಿಕರ್ತರಾಗಿದ್ದು ಸದ್ರಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಸಂಘಟನೆ ಮುಖಂಡರಾದ ಮೌನೇಶ ದೊರೆ,‌ಸುರೇಶ ಕಟ್ಟಿಮನಿ, ಜಮೀರ‌ ಪಾಷಾ ,ಪಂಪಣ್ಣ ವೆಂಕಟೇಶ ಬೋವಿ, ‌ಎಸ್.ಎನ್.ವಿರೇಶ ,ರಬ್ಬಾನಿ‌ ಜಾಹಗೀರದಾರ, ಭೀಮೇಶ‌ ಕವಿತಾಳ,ವಿರೇಶ ಹೊಸಳ್ಳಿ, ಅಹ್ಮದ್ ‌ಪಟೇಲ್ ಇದ್ದರು.
ಕರ್ನಾಟಕ ರಕ್ಷಣಾ ವೇದಿಕೆ( ‌ಪ್ರವೀಣ ಶೆಟ್ಟಿ) ಬಣ ,ಕರ್ನಾಟಕ ‌ರಕ್ಷಣಾ ವೇದಿಕೆ ಯುವಸೇನೆ , ಬಹುಜನ ದಲಿತ‌ ಸಂಘರ್ಷ ಸಮಿತಿ ,ಕರ್ನಾಟಕ ರಕ್ಷಣಾ ವೇದಿಕೆ, ನವ ಕರ್ನಾಟಕ ಕನ್ನಡಿಗರ ಸಮಿತಿ, ಹಾಗೂ ಸಿಂಧನೂರು ಮಹಿಳಾ ವೇದಿಕೆ ಮುಖಂಡರಾದ ಮಮತಾ ಹಿರೇಮಠ, ಪ್ರೇಮಾ ಸಿದ್ದಾಂತಿಮಠ, ಶಿವಲಿಲಾ ಹಿರೇಮಠ, ಲಕ್ಷ್ಮೀ ಪತ್ತಾರ, ಕಲಾವತಿ, ಸ್ವಾತಿ ಶರ್ಮಾ ,ಶನ್ನೂ ,ಅರ್ಪಿತಾ ,ಜಯಶ್ರೀ, ‌ವಿರೇಶ ಬಾವಿಮನಿ, ಬೀಮೇಶ‌ ಕವಿತಾಳ, ಲಕ್ಷ್ಮಣ ಬೊವಿ ,ರವಿ ಗೌಡ ಮಲ್ಲದಗುಡ್ಡ,ಹುಸೇನ್‌ ಭಾಷಾ ಇಂದಿರಾನಗರ ,ರಾಜೇಶ‌ ಸೇರಿದಂತೆ ಇತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು