ಜೆಡಿಎಸ್ ಪಕ್ಷದ ಮಾಜಿ ನಗರ ಸಭಾ ಸದಸ್ಯರು, ಹಾಲಿ ಜೆಡಿಎಸ್‌ನ ಹೆಬ್ಬಗೋಡಿ ನಗರಸಭೆ ಅಧ್ಯಕ್ಷ ಮುಕುಂದ್ ಪಟೇಲ್‌ರವರು ಜೆಡಿಎಸ್ ತೊರೆದು ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಬಿ. ಶಿವಣ್ಣರವರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗಟ್ಟಹಳ್ಳಿ ಸೀನಪ್ಪ, ಮುಖಂಡರಾದ ತಿರುಪಾಳ್ಯ ಉದಯಕುಮಾರ್, ಮಂಜುನಾಥ್, ಹೆಲ್ಗಗೋಡಿ ಅಂಬರೀಶ್, ಮುನಿಕೃಷ್ಣ, ಲಿಂಗಣ್ಣ, ಮತ್ತಿತರರು ಇದ್ದಾರೆ.