ಮೈಸೂರು ಚಾಮರಾಜ ವಿಧಾನಸಭಾ ಕ್ಷೇತ್ರದ ಸರಸ್ವತಿಪುರಂನ ಹುಡ್ಕೋ ಬಡಾವಣೆಯ ಬಿಸಿಲು ಮಾರಮ್ಮ ದೇವಸ್ಥಾನದ ರಸ್ತೆ ಹಾಗೂ ಪಂಪಾಪತಿ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದು ಗುದ್ದಲಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದ್ದು, ಸರಸ್ವತಿಪುರಂ ಹುಡ್ಕೋ ಬಡಾವಣೆ ಬಿಸಿಲು ಮಾರಮ್ಮನ ದೇವಸ್ಥಾನದ ರಸ್ತೆ ಹಾಗೂ ಪಂಪಾಪತಿ ರಸ್ತೆ ಮರುಡಾಂಬರೀಕರಣ ಕಾಮಗಾರಿಯು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಡೆಯಲಿದೆ.
ಈ ಸಂದರ್ಭ ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ರಾಜೀವ್, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ವಾರ್ಡ್ ಸಂ-21 ರ ವೇದಾವತಿ, ಬಸವೇಗೌಡ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಜು, ಗುತ್ತಿಗೆದಾರರಾದ ಗೋವಿಂದೇಗೌಡ ಅಂಡ್ ಸನ್ಸ್, ನಗರ ಭಾ.ಜ.ಪ ಅಧ್ಯಕ್ಷರಾದ ಶ್ರೀವತ್ಸ, ಚಾಮರಾಜ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಸೋಮಶೇಖರರಾಜು, ಉಪಾಧ್ಯಕ್ಷರಾದ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ರಮೇಶ್ & ಪುನೀತ್ ಗೌಡ, ಭಾರತೀಯ ಜನತಾ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರುಗಳಾದ ಶಿವಶಂಕರ್, ದಿನೇಶ್ ಗೌಡ , ಶ್ರೀನಿವಾಸ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಜ್ವಲಶ್ರೀವತ್ಸ, ರೈತ ಮೋರ್ಚಾ ಅಧ್ಯಕ್ಷರಾದ ದೇವರಾಜ್, ಸೋಮಶೇಖರ್ ರಾಜ್ ಅರಸ್, ಶಿವಲಿಂಗೇಗೌಡ, ನವೀನ್, ಗುರುದತ್, ಸುಬ್ರಮಣ್ಯ ಮುಂತಾದವರುಗಳು ಹಾಜರಿದ್ದರು.