ಜಯಂತಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಜಯಲಕ್ಷ್ಮಿ ಆನಂದ್ ರವರಿಗೆ ‘ವೀರ ರತ್ನ ಕಳಸ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಕುಂತಲಾ ಪ್ರಸಾದ್, ಎಂ. ಸವಿತಾ ಸುಬ್ರಮಣ್ಯ, ಜೈನ್ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್, ದಿವ್ಯಮೇರಿ, ಡಾ. ಮಧುಕೇಶವ ಹೆಗಡೆ, ಫಿಲೋಮಿನ್ ರಾಜ್, ಕೆ.ವಿ. ಚಾಂದಿನಿ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.