ಹುಬ್ಬಳ್ಳಿ,ಮಾ7 : ಇಂದು ಅಕ್ಕನ ಬಳಗದಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಜರುಗಿತು. ನೂತನ ಅಧ್ಯಕ್ಷರಾಗಿ ಶರಣೆಗೀತಾ ಲಿಂ.ಮುಳ್ಳಳ್ಳಿ, ಉಪಾಧ್ಯಕ್ಷರಾಗಿ ಶರಣೆ ನಿರ್ಮಲಾ ಅಂಗಡಿ ಕಾರ್ಯದರ್ಶಿಯಾಗಿ ಶರಣೆ ನಾಗರತ್ನಾ ಬ.ಬೆಣ್ಣೂರಮಠ, ಸಹಕಾರ್ಯದರ್ಶಿಯಾಗಿ ಶರಣೆರೂಪಾಹರ್ತಿ. ಕೋಶಾಧ್ಯಕ್ಷರಾಗಿ ಶರಣೆ ವಿಮಲಕ್ಕ ಯಳಮಲಿ, ಅಧಿಕಾರ ಸ್ವೀಕರಿಸಿದರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು. ರೂಪಾ ಹರ್ತಿ ಪ್ರಾರ್ಥಿಸಿದರು. ಸುಲೋಚನಾ ಬೂಸನೂರ ನಿರೂಪಿಸಿದರು. ಮಂಗಲಾ ಕುಪ್ಪಸ್ತ ಪ್ರತಿಜ್ಞಾವಿಧಿ ಬೋಧಿಸಿದರು. ಶರಣೆ ಶಶಿಕಲಾ ಶಿರಿಯವರು ಸ್ವಾಗತಿಸಿದರು. ಶರಣೆ ನಿರ್ಮಲಾ ಅಂಗಡಿಯವರು ವರದಿ ವಾಚಿಸಿದರು. ಪ್ರಸ್ತಾವನೆಯನ್ನು ಶರಣೆ ಗೀತಾ ಲಿಂ. ಮುಳ್ಳಳ್ಳಿಯವರಿಂದ, ವಂದನಾರ್ಪಣೆ ಶರಣೆ ನಾಗರತ್ನಾ ಬ.ಬೆಣ್ಣೂರಮಠ ಅವರಿಂದ ಜರುಗಿತು. ಮಾಜಿ ಅಧ್ಯಕ್ಷರಾದ ಶರಣೆ ಶಶಿಕಲಾ ಶಿರಿಯವರು ರೂ.25000/- ದೇಣಿಗೆ ನೀಡಿದರು. ಸ್ವಾಮೀಜಿಯವರು ಅಕ್ಕನ ಬಳಗವು ನಿರಂತರವಾಗಿ ಸಾಮಾಜಿಕವಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಉನ್ನತಿಗೆ ಶ್ರಮಿಸುತ್ತದೆ ಎಂದು ಹೇಳಿದರು.