ಕಲಬುರಗಿ:ಸಾಲುಮರದ ತಿಮ್ಮಕ್ಕನಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಯನ್ನು ವಿತರಣೆ ಮಾಡಿತು. ಇಂದು ಬೆಂಗಳೂರಿನ ಅವರ ಸ್ವಮನೆಯಲ್ಲಿ ತಿಮ್ನಕ್ಕನಿಗೆ ಪ್ರಶಸ್ತಿ ನೀಡಿದರು. ವಿಶ್ವವಿದ್ಯಾಲಯ ಕುಲಪತಿ ಪ್ರೊ ಎಚ್ ಎಂ ಮಹೇಶ್ವರಯ್ಯ, ಭಾಷಾ ವಿಜ್ಞಾನಿ ಪ್ರೊ ರಾಜೇಶ್ವರಿ ಮಹೇಶ್ವರಯ್ಯ, ಮಾನವಿಕ ಮತ್ತು ಭಾಷಾನಿಕಾಯದ ಡೀನ್ ಪ್ರೊ ಬಸವರಾಜ ಡೊಇಣೂರ, ಕನ್ನಡ ವಿಭಾಗದ ಮುಖ್ಯಸ್ಥ ವಿಕ್ರಮ ವಿಜಾಜಿ, ಕ್ಲಾಸಿಕಲ್ ಕನ್ನಡದ ನಿರ್ದೇಶಕ ಪ್ರೊ ಬಿ. ಬಿ. ಪೂಜಾರಿ, ಸಹಾಯಕ ಕುಲಸಚಿವ ಅಜೀಂ ಬಾಷಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದರು.