ಸಮಾಜ ಸೇವಕ, ದಿವ್ಯದರ್ಶನ ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ರಿ) ವಿಜಯನಗರ ಬಾಗಲಕೋಟದ ಕಾರ್ಯದರ್ಶಿ ಡಾ|| ಪ್ರಲ್ಹಾದ ಭೋಯಿಯವರಿಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಬಾಗಲಕೋಟ ಜಿಲ್ಲಾ ಆಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ತನ್ನಿಮಿತ್ಯ ಅವರ ಹುಟ್ಟೂರಾದ ಹಿರೇಗುಳಬಾಳದಲ್ಲಿ ಡಾ|| ಪ್ರಲ್ಹಾದ ಭೋಯಿಯವರಿಗೆ ಶ್ರೀ ಬಸವೇಶ್ವರ ದೇವಸ್ಥಾನದ ದೈವ ಬಳಗದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.