ಮುದ್ದೇಬಿಹಾಳ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಇಟ್ಟಿರುವ ಅನಧಿಕೃತ ಡಬ್ಬಾ ಅಂಗಡಿಗಳು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ. ಬೇಕಾ ಬಿಟ್ಟಿಯಾಗಿ ಇಟ್ಟಿರುವ ಡಬ್ಬಾ ಅಂಗಡಿಗಳನ್ನ ತೆರವುಗೊಳಿಸುವಂತೆ ತಾಲೂಕು ಯುವ ಜನ ಸೇನೆಯ ಸದಸ್ಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.