ಮುದ್ದೇಬಿಹಾಳ: ಪಟ್ಟಣದ ಮಿನಿವಿಧಾನಸೌಧದಲ್ಲಿರುವ ಸಕಾಲ ಕೇಂದ್ರ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಈ ಕೂಡಲೆ ಹೊಸ ಪಡಿತರ ಕಾರ್ಡ ಪಡೆಯಲು ಆನ್‍ಲೈನ ಪ್ರಾರಂಭ ಮಾಡಬೇಕು ಎಂದು ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ ಜಿ.ಎಸ್.ಮಳಗಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.