ಕಲಬುರಗಿ:ಭೂಸುಧಾರಣಾ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ, ವಿದ್ಯುತ್ ಮಸೂದೆ ತಿದ್ದುಪಡಿ ವಿರೋಧಿಸಿ ಹಾಗೂ ಅತಿವೃಷ್ಟಿ ಪರಿಹಾರದಲ್ಲಿ ಸರ್ಕಾರದ ತಾರತಮ್ಯ ವಿರೋಧಿಸಿ ಗುರುವಾರ ನಗರದ ಜಗತ್ ವೃತ್ತದಲ್ಲಿ ಅಖಿಲ ಭಾರತ್ ಕಿಸಾನ್ ಸಂಘರ್ಷ ಸಮಿತಿಯ ಕಾರ್ಯಕರ್ತರು ರಸ್ತೆ ತಡೆ ಚಳುವಳಿ ಮಾಡಿದಾಗ ಪೋಲಿಸರು ತೀವ್ರ ವಿರೋಧದ ಮಧ್ಯೆ 50ಕ್ಕಿಂತ ಹೆಚ್ಚು ರೈತ ಮುಖಂಡರನ್ನು ಬಂಧಿಸಿ ಕರೆದೊಯ್ದರು.