ಬಿಹಾರ: ದೋಣಿ ಮುಳುಗಿ ಕಾರ್ಮಿಕರು ಜಲಸಮಾಧಿ

ಬಾಗಲ್ಪುರ,ಸೆ.5- ಸರಿ ಸುಮಾರು 50 ಕೃಷಿ ಮತ್ತು ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬಿಹಾರದ ಬಾಗಲ್ಪುರದಲ್ಲಿ‌ ಮುಳುಗಡೆಯಾಗಿದೆ.‌ ಹಲವು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

40 ವರ್ಷದ ಮಹಿಳೆ ಮೃತಪಟ್ಟಿದ್ದು ಇನ್ನೂ 7 ಮಂದಿ ನೀರಿನಲ್ಲಿ ಜೀವಂತ ಜಲ ಸಮಾಧಿ ಯಾಗಿದ್ದು ‌ಇನ್ನಷ್ಟು ಮಂದಿ ಸಾವಿಗೀಡಾಗುವ ಶಂಕೆ ವ್ತಕ್ತಪಡಿಸಲಾಗಿದೆ.

ದೋಣಿ ನದಿಯಲ್ಲಿ ಮಗುಳುಗುತ್ತಿದ್ದಂತೆ ಕೆಲವರು ಈಜಿ ದಡ ಸೇರಿದ್ದಾರೆ. ಈಜು ಬರದ ಮಂದಿ ನದಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆ ಮುಂದುವರಿದೆ. ಆ ನಂತರವೇ ನಿಖರ ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೌಗಾಚಿಯಾ ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಈ ದುರ್ಘಟನೆ ನಡೆದಿದೆ. ಕೃಷಿ ಮತ್ತು ಕೂಲಿಕಾರ್ಮಿಕರೇ ಹೆಚ್ಚಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಬಾಗಲ್ಪುರ ಜಿಲ್ಲಾಧಿಕಾರಿ ಪ್ರವಣ್ ಕುಮಾರ್ ಹೇಳಿದ್ದಾರೆ.

ಸದ್ಯ ನದಿಯಲ್ಲಿ ಪ್ರಾಣ ಕಳೆದುಕೊಂಡ ಓರ್ವ ಮಹಿಳೆಯ ಮೃತ ದೇಹ ಹೊರ ತೆಗೆಯಲಾಗಿದೆ. ಉಳಿದವರಿಗಾಗಿ ಶೋಧ ಮುಂದುವರಿದಿದೆ..ಮೃತ ಪಟ್ಟ ವ್ಯಕ್ತಿಯನ್ನು ಗೋಪಾಲಪುರ ಪೋಲೀಸ್ ಠಾಣೆಯ ವ್ಯಾಪ್ತಿಯ ತಿಂತ ಗಂಗಾ ಗ್ರಾಮದ ಸುನೈನಾ ದೇವಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಳು ಮಂದಿ ಕಾಣೆಯಾಗಿದ್ದಾರೆ ಎಂದು ಅಂದಾಜಿಸಲಾಗಿದ್ದು ಅವರಲ್ಲ್ಲಾ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಣೆಯಾದವರ ಶೋಧ ಮುಂದುವರಿದಿದೆ.‌ಸ್ಥಳದಲ್ಲಿ ಎಸ್ ಡಿ ಆರ್ ಎಫ್ ತಂಡ, ಮುಳುಗು ತಂಡ ಬೀಡು ಬಿಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.