
ದಾವಣಗೆರೆ ಮಾ. ,7; ದಿನನಿತ್ಯ ನಗರದ ಸ್ವಚ್ಚತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿರುವುದು ಅತ್ಯಂತ ಸಂತಸ ತಂದಿದೆ ಶೀಘ್ರವೇ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರರಿಸಲಾಗುವುದು ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ ಹೇಳಿದರು.
ನಗರದ ಹೊರವಲಯದ ದೊಡ್ಡಬೂದಿಹಾಳ್ ಗ್ರಾಮದಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಿಸಲಾದ ಮನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಪೌರಕಾರ್ಮಿಕರಿಗಾಗಿ ಅತ್ಯಂತ ಸುಸಜ್ಜಿತವಾಗಿ ಮನೆ ನಿರ್ಮಿಸಲಾಗಿದೆ ಅದೇ ಇಲಾಖೆಯ ಸಚಿವನಾಗಿ ನನಗೆ ನೆಮ್ಮದಿ ತಂದಿದೆ ರೂ.51 ಕೋಟಿ ವೆಚ್ಚದಲ್ಲಿ ಜಿ+1 ಮಾದರಿಯ 381 ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.ಪ್ರತಿ ಮನೆಗೆ 13.40 ಲಕ್ಷ ವೆಚ್ಚವಾಗಿದೆ ಪ್ರತಿ ಬ್ಲಾಕ್ ನಲ್ಲಿ ನೆಲ ಮತ್ತು ಮಹಡಿ ಸೇರಿ 04 ಮನೆಗಳಿದ್ದು ಪ್ರತಿ ಮನೆಯು 54 ಚ.ಮೀ ವಿಸ್ತೀರ್ಣ ಹೊಂದಿದೆ. ಕೇಂದ್ರ ಸರ್ಕಾರ 1.75 ಲಕ್ಷ ರಾಜ್ಯ ಸರ್ಕಾರ 8.13 ಲಕ್ಷ ಮಹಾನಗರಪಾಲಿಕೆ 2.81 ಲಕ್ಷ ಹಾಗೂ ಫಲಾನುಭವಿಗಳ ವಂತಿಕೆ 62.500 ರೂ ಗಳನ್ನು ಕ್ರೂಡೀಕರಿಸಿ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.ಮಿನಿ ವಿಧಾನ ಸೌಧ ಉದ್ಘಾಟನೆ: ರೂ.582.57 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧ ಹಾಗೂ ಅಲ್ಪ ಸಂಖ್ಯಾತರ ರೂ.393 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನಗರದ ಕುಂದುವಾಡ ಗ್ರಾಮದ ಬಳಿ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು 50 ಸಂಖ್ಯಾ ಬಲದ ಉದ್ಯೋಸ್ಥ ಮಹಿಳಾ ವಿದ್ಯಾರ್ಥಿನಿಲಯಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದರುದೂರ ಹಳ್ಳಿಗಳಿಂದ ಮತ್ತು ತಾಲ್ಲೂಕು ಕೇಂದ್ರಗಳಿಂದ ನಗರದಕ್ಕೆ ವಿದ್ಯಾಭ್ಯಾಸ ಮತ್ತು ಕೆಲಸ ಅರಸಿ ಬರುವ 50 ವಿದ್ಯಾರ್ಥಿನಿಯರಿಗೆ ಮತ್ತು 50 ಉದ್ಯೂಗಸ್ಥ ,ಮಹಿಳೆಯರಿಗೆ ಉಚಿತ ಊಟ ವಸತಿ ಹಾಗೂ ಇನ್ನಿತರೆ ಮೂಲಭೂತಸೌಲಭ್ಯಗಳನ್ನು ಈ ವಿದ್ಯಾರ್ಥಿನಿಲಯಗಳಲ್ಲಿ ಉದ್ದೇಶ ಹೊಂದಲಾಗಿದೆ. . ಬಸ್ ನಿಲ್ದಾಣ ಲೋರ್ಕಪಣೆ: ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ ದಾವಣಗೆರೆ ನಗರದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಮಹಾನಗರಪಾಲಿಕೆ ಮಾಲೀಕತ್ವದಲ್ಲಿಯ ಹಳೇ ಬಸ್ ನಿಲ್ದಾಣದ ಸ್ಥಳದಲ್ಲಿ ರೂ. 26.42 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನವಿಕೃತ ಹೊಸ ಬಸ್ ನಿಲ್ದಾಣವನ್ನು ಇಂದು ಲೋಕಾರ್ಪಣೆಗೊಳಿಸಿದರು.