81 ಸಾವಿರ ಮೌಲ್ಯದ ಗಾಂಜಾ ವಶ: ಇಬ್ಬರ ಬಂಧನ

ಕಲಬುರಗಿ, ಡಿ 31: ಸಿ.ಸಿ.ಬಿ ಘಟಕದವರು ದಾಳಿ ನಡೆಸಿ ಬ್ರಹ್ಮಪುರ ಪೆÇಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ಉದ್ಯಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಬಂಧಿತನಿಂದ 31 ಸಾವಿರ ರೂ ಮೌಲ್ಯದ 3 ಕೆ.ಜಿ 100 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಬೀದರ ಜಿಲ್ಲೆ ಹುಮನಾಬಾದ್ ತಾಲೂಕಿನ ಘೋಡವಾಡಿಯ ಮಹಮದ್ ಷರೀಪ್ ಮಹಮದ್ ಯುಸೂಪ್ ಮಿಯಾ ಬಂಧಿತ ಆರೋಪಿ .
ಇನ್ನೊಂದು ಪ್ರಕರಣದಲ್ಲಿ ಸಬ್ ಅರ್ಬನ್ ಪೆÇಲೀಸ್ ಠಾಣಾ ವ್ಯಾಪ್ತಿಯ ಕಪನೂರ್ ಇಂಡಸ್ಟ್ರಿಯಲ್ ಏರಿಯಾ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 50 ಸಾವಿರ ರೂ ಮೌಲ್ಯದ 531 ಗ್ರಾಂ ಗಾಂಜಾ ಮತ್ತು 2 ಸಾವಿರ ರೂನಗದು ವಶಪಡಿಸಿಕೊಳ್ಳಲಾಗಿದೆ. ಆಟೋ ಚಾಲಕ ಮಹಮದ್ ನಬಿ ಮಹಿಬೂಬ್ ಅಲಿ ಬಂಧಿತ ಆರೋಪಿ.
ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದಿಸಿ ಮೆಚ್ಚುಗೆ ಸೂಚಿಸಿದ್ದಾರೆ.