ಶ್ರೀರಾಮ ಮಂದಿರ ನಿರ್ಮಾಣ ನೆರವೇರಲೆಂದು ಹಾರೈಸಿ 2018ರಲ್ಲಿ ಹುಬ್ಬಳ್ಳಿಯಿಂದ ಶ್ರೀಕ್ಷೇತ್ರ ಗುಡ್ಡಾಪುರಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದ ವೀರಯ್ಯಸ್ವಾಮಿ ಸಾಲಿಮಠ, ಫಕ್ಕೀರಯ್ಯ ಬಿಚಗತ್ತಿಮಠ, ಕಲ್ಲಯ್ಯ ಕುರಡಿಕೇರಿ ಇವರು ಅಭೀಷ್ಟೆ ಈಡೇರಿದ ಸಂಭ್ರಮದಲ್ಲಿ ಇಂದು ಮತ್ತೆ ಹಳೇ-ಹುಬ್ಬಳ್ಳಿ ಜಂಗಳಿಪೇಟ ಬಸವಣ್ಣ ದೇವರ ಗುಡಿಯಿಂದ ಶ್ರೀಕ್ಷೇತ್ರಕ್ಕೆ ಸೈಕಲ್ ಯಾತ್ರೆ ಕೈಗೊಂಡರು. ಲೋಕೇಶ ಗುಂಜಾಳ ಚಾಲನೆ ನೀಡಿದರು. ಪ್ರಕಾಶ ಕುಲಕರ್ಣಿ, ಚನ್ನಬಸಯ್ಯ ಹಿರೇಮಠ ಉಪಸ್ಥಿತರಿದ್ದರು.