ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್‍ನಲ್ಲಿರುವ ಎಮ್‍ಡಬ್ಯ್ಲುಬಿ ಗ್ರೂಪ್ ಪ್ರಧಾನ ಕಚೇರಿ ಹಾಗೂ ಘಟಕಗಳಿಂದ ಶ್ರೀರಾಮನ ಪೂಜೆ ನೆರವೇರಿಸಿ ಪ್ರಸಾದ ವಿತರಣೆ ಮಾಡಲಾಯಿತು. ಎರಡೆತ್ತಿನ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಭಜನೆ, ದೀಪೋತ್ಸವ ನೆರವೇರಿತು. ರಮೇಶ್ ಬಾಫನಾ, ರಾಕೇಶ್ ಬಾಫನಾ, ಪ್ರಕಾಶ್ ಜಿಗಳೂರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.