ಮಳವಳ್ಳಿ ಅವಘಡಕ್ಕಾಗಿ ಕಾಯುತ್ತಿರುವ ಮಳವಳ್ಳಿ ಪೇಟೆಬೀದಿ ರಸ್ತೆ ಹಲವಾರು ವರ್ಷಗಳಿಂದ ತಡೆಗೋಡೆ ಇಲ್ಲದೇ ಪೇಟೆಬೀದಿಯ ಮುಖ್ಯರಸ್ತೆ ಮಳವಳ್ಳಿ – ಕನಕಪುರ ರಸ್ತೆಗೆ ಸೇರುತ್ತಿದ್ದು ಅಗಲೀಕರಣಗೊಂಡರೂ ದೊಡ್ಡ ಮೋರಿ ಬಳಿ ಅಗಲೀಕರಣ ಕೊಳ್ಳದೆ ಹಾಗೆಯೇ ಉಳಿದಿದೆ. ರಾತ್ರಿ ವೇಳೆಯಲ್ಲಿ ಸರ್ಕಲ್ ಕಡೆಯಿಂದ ಪೇಟೆಬೀದಿ ಕಡಗೆ ಅಪರಿಚಿತರು ಹಾಗೂ ಪಾದಚಾರಿಗಳು ವಾಹನದಲ್ಲಿ ಬಂದರೆ ಮೋರಿಗೆ ಬಿದ್ದರೆ ಅಪಘಾತವಾಗುವುದು ಕಟ್ಟಿಟ್ಟಬುತ್ತಿ. ಆದ್ದರಿಂದ ಇದನ್ನು ಸರಿಪಡಿಸುವಂತೆ ಸಾರ್ವಜನಿಕರ ಒತ್ತಾಯ. ಇದಕ್ಕೆ ಸಂಬಂಧಪಟ್ಟವರು ಗಮನಹರಿಸಿ ಇನ್ನು ಮುಂದಾದರೂ ಸರಿಪಡಿಸಲು ಗಮನಹರಿಸುವರೇ ಕಾದುನೋಡಬೇಕಿದೆ.