80 ಸಾವಿರ ವಯಲ್ಸ್ ಎಂಫೋಟೆರಿಸಿನ್-ಬಿ ಅಮದು: ರಾಜ್ಯಕ್ಕೆ 5190 ವಯಲ್ಸ್ : ಡಿವಿಎಸ್

ನವದೆಹಲಿ, ಮೇ.27- ಕಪ್ಪು ಶಿಲೀಂದ್ರ ರೋಗಿಗಳ ಚಿಕಿತ್ಸೆಗಾಗಿ 80 ಸಾವಿರ ವಯಲ್ಸ್ ಎಂಫೋಟೆರಿಸಿನ್-ಬಿ ದೇಶದಕ್ಕೆ ಅಮದಾಗಿದ್ದು ಆ ಪೈಕಿ 5190 ವಯಲ್ಸ್ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ‌ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.

ಇಂದು ಆಮದಾದ 80,000 ವಯಲ್ಸ್ ಎಂಫೋಟೆರಿಸಿನ್-ಬಿ ಚುಚ್ಚುಮದ್ದನ್ನು ತಕ್ಷಣವೇ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಕರ್ನಾಟಕಕ್ಕೆ 5190 ವಯಲ್ಸ್ ಒದಗಿಸಲಾಗಿದೆ. ಇದರೊಂದಿಗೆ ರಾಜ್ಯಕ್ಕೆ ಇದುವರೆಗೆ ಒಟ್ಟು 10,370 ವಯಲ್ಸ್ ಎಂಫೊಟೆರಿಸಿನ್-ಬಿ ಪೂರೈಸಿದಂತಾಗಿದೆ ಎಂದು ಹೇಳಿದ್ದಾರೆ.

ನಿನ್ನೆಯ ತನಕ ವರೆಗೆ 5180 ಚುಚ್ಚುಮದ್ದು ಕಪ್ಪು ಶಿಲೀಂದ್ರ ರೋಗಿಗಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರಕ್ಕೆ ಹಂಚಿಕೆ ಮಾಡಲಾಗಿತ್ತು. ಇಂದು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಹಂಚಿಕೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ 5190 ವಯಲ್ಸ್ ಚುಚ್ಚುಮದ್ದು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅವಲ್ಲದೆ ಕರೋನಾ ಚಿಕಿತ್ಸೆಗಾಗಿ ಒಟ್ಟು 14,25,000 ವಯಲ್ಸ್ ರೆಮಿಡಿಸಿವಿರ್ ಚುಚ್ಚುಮದ್ದು ಮೇ‌ 31 ವರೆಗೆ ಈಗಾಗಲೇ ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ.ಇದರ ಜೊತೆಗೆ ಒಟ್ಟು 13935 ಟೋಸಿಲಿಜಿಂಬ್ ಚುಚ್ಚುಮದ್ದನ್ನು ಸಹ ರಾಜ್ಯಕ್ಕೆ ವಿತರಿಸಲಾಗಿದೆಯೆಂದು ತಿಳಿಸಿದ್ದಾರೆ.