80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ

????????????????????????????????????


ಬಳ್ಳಾರಿ,ಏ.30- ಚುನಾವಣೆ ಆಯೋಗವು 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ವಿಶೇಷ  ಮತದಾನ ವ್ಯವಸ್ಥೆ ಕಲ್ಪಿಸಿದ್ದು, ಜಿಲ್ಲೆಯಲ್ಲಿ 12ಡಿ ಫಾರಂ ಅಡಿ ನೊಂದಾಯಿಸಿಕೊಂಡಿದ್ದ 277 ಮತದಾರರ ಪೈಕಿ ಶನಿವಾರದಂದು, 250 ಮತದಾರರು ತಮ್ಮ ಮತವನ್ನು ಮನೆಯಿಂದಲೇ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
 ಮನೆಯಿಂದಲೇ ಮತದಾನ ಮಾಡಿದ ವಿಕಲಚೇತನ ಮತ್ತು 80 ವರ್ಷ ಮೇಲ್ಪಟ್ಟ ಮತದಾರರ ಅಂಕಿ-ಅಂಶ:
ಕಂಪ್ಲಿ ವಿಧಾನಸಭಾ ಕ್ಷೇತ್ರ: 91-ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 54 ಜನ ಮತದಾರರ ಪೈಕಿ 46 ಜನ ಮತದಾರರು ಮತದಾನ ಮಾಡಿದ್ದಾರೆ ಮತ್ತು 10 ಜನ ವಿಶೇಷಚೇತನರು ನೊಂದಾಯಿಸಿಕೊಂಡಿದ್ದ 10 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 64 ಜನ ಮತದಾರರಲ್ಲಿ 56 ಜನ ಮತದಾನ ಮಾಡಿದ್ದು, ಮತದಾನಕ್ಕೆ ನೊಂದಣಿಗೊಂಡಿದ್ದ 80 ವರ್ಷ ಮೇಲ್ಪಟ್ಟವರ ಪೈಕಿ 5 ಜನ ಸಾವನ್ನಪ್ಪಿದ್ದು, 3 ಜನ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ: 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 12 ಮತದಾರರ ಪೈಕಿ 10 ಜನ ಮತದಾನ ಮಾಡಿದ್ದು, 4 ವಿಶೇಷ ಚೇತನರಲ್ಲಿ 4 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 16 ಜನ ಮತದಾರರಲ್ಲಿ 12 ಜನ ಮತದಾನ ಮಾಡಿದ್ದು, ಮತದಾನಕ್ಕೆ ನೊಂದಣಿಯಾಗಿದ್ದ 80 ವರ್ಷ ಮೇಲ್ಪಟ್ಟ ಇಬ್ಬರು ಸಾವನ್ನಪ್ಪಿರುತ್ತಾರೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ: 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 3 ಮತದಾರರ ಪೈಕಿ 3 ಜನ ಮತದಾನ ಮಾಡಿದ್ದು, ಒಬ್ಬ ವಿಶೇಷ ಚೇತನರು ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 4 ಜನ ಮತದಾರರಲ್ಲಿ 4 ಜನ ಮತದಾನ ಮಾಡಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 147 ಮತದಾರರ ಪೈಕಿ 132 ಜನ ಮತದಾನ ಮಾಡಿದ್ದು, 11 ವಿಶೇಷ ಚೇತನ ಮತದಾರರಲ್ಲಿ 11 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 158 ಜನ ಮತದಾರರಲ್ಲಿ 143 ಜನ ಮತದಾನ ಮಾಡಿದ್ದಾರೆ. ಅದರಲ್ಲಿ ನೊಂದಣಿಯಾಗಿದ್ದ 80 ವರ್ಷ ಮೇಲ್ಪಟ್ಟ 15 ಜನ ಮತದಾರರಲ್ಲಿ 4 ಜನ ಮೃತರಾಗಿದ್ದು, 6 ಜನ ಆಸ್ಪತ್ರೆ ದಾಖಲಾಗಿದ್ದಾರೆ, 4 ಜನ ಸ್ಥಳಾಂತರ ಹಾಗೂ ಒಬ್ಬರು ನಾಳೆ ಮತದಾನ ಮಾಡಲಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ: 95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 25 ಮತದಾರರ ಪೈಕಿ 23 ಜನ ಮತದಾನ ಮಾಡಿದ್ದು, 10 ವಿಶೇಷ ಚೇತನ ಮತದಾರರಲ್ಲಿ 10 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 35 ಜನ ಮತದಾರರಲ್ಲಿ 33 ಜನ ಮತದಾನ ಮಾಡಿದ್ದಾರೆ. ಅದರಲ್ಲಿ 80 ವರ್ಷ ಮೇಲ್ಪಟ್ಟ 2 ಮತದಾರರು ಮೃತರಾಗಿದ್ದಾರೆ.
80 ವರ್ಷ ಮೇಲ್ಪಟ್ಟ 241 ಮತದಾರರ ಪೈಕಿ 214 ಜನ ಮತದಾನ ಮಾಡಿದ್ದಾರೆ. 36 ವಿಶೇಷಚೇತನ ಮತದಾರರಲ್ಲಿ 36 ಜನ ಮತದಾನ ಮಾಡಿದ್ದು, ಒಟ್ಟು 277 ಮತದಾರರಲ್ಲಿ 250 ಜನ ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ 12 ಡಿ ಅಡಿ ಅರ್ಜಿ ಸಲ್ಲಿರುವವರ ಮನೆ ಮನೆಗೆ ತೆರಳಿ ಮತದಾನ ಅಧಿಕಾರಿಗಳು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಸುವರು. ಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುತ್ತದೆ. ಮತದಾನ ಮಾಡಿಸಲು ಚುನಾವಣಾಧಿಕಾರಿಗಳು  ರೂಟ್ ಮ್ಯಾಪ್ ಹಾಗೂ ನಿಗದಿತ ಸಮಯ ಹಾಗೂ ದಿನಾಂಕವನ್ನು ನೀಡಿರುತ್ತಾರೆ. ಅ ಸಮಯದಲ್ಲಿ  ನಿರ್ದಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಬ್ಯಾಲೆಟ್ ಪೇಪರ್‍ನಲ್ಲಿ ಪಡೆಯಲಾಗುತ್ತದೆ. ತಂಡದಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ಪೋಲಿಂಗ್ ಅಧಿಕಾರಿಗಳು, ಪೆÇಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಹಾಗೂ ಗ್ರೂಪ್ ಡಿ ಸಿಬ್ಬಂದಿ ಇರುತ್ತಾರೆ ಎಂದು ಅವರು ತಿಳಿಸಿದ್ದಾರೆ.