
ಕಲಬುರಗಿ,ಏ.29:ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟ, ಪಿ.ಡಬ್ಲ್ಯೂ.ಡಿ (ವಿಶೇಷ ಚೇತನರು) ಹಾಗೂ ಕೋವಿಡ್-19 ಮತದಾರರಿಗೆ ಅಂಚೆ ಪತ್ರದ ಮೂಲಕ ಮನೆಯಿಂದ ಮತ ಚಲಾಯಿಸಲು ಭಾರತ ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದೆ.
ಆದ್ದರಿಂದ 44-ಗುಲ್ಬರ್ಗಾ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ, ಚುನಾವಣಾ ಸಾಮಾನ್ಯ ವೀಕ್ಷಕರಾದ ಜಯಂದಿ, 44-ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಚುನಾವಣಾಧಿಕಾರಿ ಪ್ರಕಾಶ ರಜಪೂತ, ಚುನಾವಣಾ ಅಭ್ಯರ್ಥಿಗಳು, ಏಜೆಂಟರÀ ಸಮ್ಮುಖದಲ್ಲಿ, ಪೊಲಿಂಗ್ ಸಿಬ್ಬಂದಿಗಳ ರ್ಯಾಂಡಮೈಜೆಸೆನ್ ಮಾಡಲಾಯಿತು.