80 ವರ್ಷ ಮೆಲ್ಪಟ್ಟವರಿಗೆ, ಅಂಗವಿಕಲರಿಗೆ ಮನೆಯಲ್ಲಿ ಮತದಾನದ ವ್ಯವಸ್ಥೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.30: ವಿಧಾನಸಭಾ ಚುನಾವಣೆಯಲ್ಲಿ ಈ ಭಾರಿ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಲ್ಲಿ ಗುಪ್ತ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಹೇಳಿದರು.  ಇಂದು ನಗರದ ತಹಶೀಲ್ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.   ವಿಧಾನಸಭಾ ಚುನಾವಣೆ ಹಿನ್ನಲೆ ನಿನ್ನೆಯಿಂದ ನೀತಿ ಸಂಹಿತೆ ಜಾರಿಯಾಗಿದ್ದು, ಗಂಗಾವತಿ ಕ್ಷೇತ್ರದಲ್ಲಿ ಒಟ್ಟು 235 ಮತಗಟ್ಟೆಯನ್ನು ಗುರುತಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 200597  ಮತದಾರರು ಇದ್ದಾರೆ. ಇದರಲ್ಲಿ ಮಹಿಳೆಯರು 101029 ಪುರುಷರು, 99497 ಇತರೆ 11 ಮತದಾರರು ಇದ್ದಾರೆ. 80 ವರ್ಷ  ಮೇಲ್ಪಟ್ಟವರು ಕ್ಷೇತ್ರದಲ್ಲಿ 2965 ಹಾಗೂ 2555 ಅಂಗವಿಕಲರಿಗೆ ಮತದಾನ ಮಾಡಲು ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಗಂಗಾವತಿ ತಾಲೂಕಿನಲ್ಲಿ ಕಡೆಬಾಗಿಲು, ಜಂಗಮರ ಕಲ್ಗುಡಿ, ವಿದ್ಯಾನಗರದಲ್ಲಿ ಭಾಗದಲ್ಲಿ ಒಟ್ಟು 3 ಚೆಕ್ ಪೋಸ್ಟ್ ತೆರಯಲಾಗಿದೆ. ಗಂಗಾವತಿ ಸೂಕ್ಷ್ಮ ಪ್ರದೇಶವೆಂದು 11ಏರಿಯಾ ಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ಯಾವುದೇ ದೂರು ನೀಡಲು ಸಹಾಯವಾಣಿ ಸಂಖ್ಯೆ 1950 ಕರೆ ಮಾಡಿ ತಿಳಿಸಬಹುದು ಹಾಗೂ ಈ ಭಾರಿ ವಿಶೇಷವಾಗಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಲು ಇ-ವಿಜಿಲ್ ವ್ಯವಸ್ಥೆ ಮೂಲಕ ದೂರನ್ನು ಸಲ್ಲಿಸಬಹುದು ಎಂದರು. ಈ ವೇಳೆ ತಹಶಿಲ್ದಾರ ಮಂಜುನಾಥ, ಪೌರಾಯುಕ್ತ ವಿರುಪಾಕ್ಷಮೂರ್ತಿ, ಡಿವೈಎಸ್ಪಿ ಎಚ್. ಶೇಖರಪ್ಪ, ಇದ್ದರು.