
ಹುಬ್ಬಳ್ಳಿ, ಮಾ28: ಬಾಂದಾರ ನಿರ್ಮಾಣದಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
80 ಲಕ್ಷ ರೂ. ಅನುದಾನದಲ್ಲಿ ಇಲ್ಲಿನ ಬಿಡ್ನಾಳದ ಬಳಿಯ ಹಳ್ಳಕ್ಕೆ ಬಾಂದಾರ (ಚೆಕ್ ಡ್ಯಾಂ) ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವ್ಯರ್ಥವಾಗಿ ಹರಿಯುವ ನೀರನ್ನು ತಡೆದು ಬೇಸಿಗೆಯಲ್ಲಿ ಬೆಳೆ ಬೆಳೆಯಲು ಬಾಂದಾರ ನಿರ್ಮಾಣ ಅವಶ್ಯವಿದ್ದು, ಕ್ಷೇತ್ರದ ಬಮ್ಮಾಪುರ, ಯಲ್ಲಾಪುರ, ಬಿಡ್ನಾಳ, ಗಬ್ಬೂರು ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಈಗಾಗಲೇ ಅನೇಕ ಕಡೆ ಕೋಟ್ಯಂತರ ರೂ. ವೆಚ್ಚದಲ್ಲಿ ಬಾಂದಾರಗಳನ್ನು ನಿರ್ಮಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಪಾಲಿಕೆ ಮಾಜಿ ಸದಸ್ಯರಾದ ಗಣೇಶ ಟಗರಗುಂಟಿ, ವಿಜನಗೌಡ ಪಾಟೀಲ, ರೈತ ಮುಖಂಡರಾದ ಪರುತಪ್ಪ ಬಳಗಣ್ಣವರ, ಫಕ್ಕೀರಪ್ಪ ಕಲ್ಲಣ್ಣವರ, ಸಿದ್ದಪ್ಪ ಮೇಟಿ, ಈಶ್ವರಪ್ಪ ಅಂಚಟಗೇರಿ, ಹನುಮಂತಗೌಡ ಪಾಟೀಲ, ವೀರಭದ್ರಪ್ಪ ಅಸುಂಡಿ, ಶಂಕರಣ್ಣ ಅಸುಂಡಿ, ಶಿವಾನಂದ ಮಮ್ಮಿಗಟ್ಟಿ, ಭೀಮಣ್ಣ ಬಡಿಗೇರ, ನಿಂಗಪ್ಪ ಅವರಾದಿ, ಸಿದ್ದಪ್ಪ ಅಂಚಟಗೇರಿ, ವಿರುಪಾಕ್ಷಗೌಡ ಪಾಟೀಲ, ಮುಖಂಡರಾದ ಭರತ್ ಜೈನ್, ಮಂಜು ಉಪ್ಪಾರ, ಪ್ರಸನ್ನ ಮಿರಜಕರ್, ಅಜರುದ್ದಿನ್ ಮನಿಯಾರ್, ಮುಲ್ಲಾ ಮೇಸ್ತ್ರಿ, ದ್ಯಾಮಣ್ಣ ತಳವಾರ, ಈಶ್ವರ ಅವರಾದಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಅಣ್ಣಿಗೇರಿ, ಇತರರು ಇದ್ದರು.