
ಇಂಡಿ:ಮಾ.10: ಶ್ರೀರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಈ ಭಾಗದ ರೈತರ ಬಹುದಿಗಳ ಕನಸು ಇಡೇರಿಸಿದ ಶುಭಗಳಿಗೆ ಕೂಡಿ ಬಂದಿದೆ. ಇಂಡಿ ,ನಾಗಠಾಣ ಸುಮಾರು 70 ಸಾವಿರ ಹೆಕ್ಟರ್ ಪ್ರದೇಶದ ರೈತರ ಭೂಮಿಗೆ ಅನುಕೂಲವಾಗಲಿದೆ .ಸಮಸ್ಯ ಏನೇ ಇದ್ದರೂ ಬರುವ ದಿನಗಳಲ್ಲಿ 80 ಟಿ.ಎಂ. ಸಿ ನೀರು ಕೊಡಲು ನಾವು ಬದ್ದತೆಯಿಂದ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.
ಹೋರ್ತಿ ಶ್ರೀರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಹಂತ-01 ಹಾಗೂ ಇಂಡಿ ತಾಲೂಕಿನ 16 ಕೆರೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆವೇರಿಸಿ ಮಾತನಾಡಿದ ಅವರು ಜನರ, ರಾಜ್ಯದ ವಿಷಯ ಬಂದಾಗ ಸವಾಲುಗಳಾಗಿ ಸ್ವೀಕರಿಸಿ ಬದ್ದತೆಯಿಂದ ಕೆಲಸ ಮಾಡುತ್ತೇನೆ. ರಾಜಕೀಯ ಮಾಡುವುದು ಬೇಡ ಸ್ವಾತಂತ್ರ್ಯ ಪೂರ್ವ ಸ್ವಾತಂತ್ರ್ಯ ನಂತರ ಈ ಭಾಗದ ಜನರು ರೈತಾಪಿ ವರ್ಗ ಹನಿ ನೀರು ಇಲ್ಲದೆ ಕಷ್ಟದಲ್ಲಿದ್ದಾರೆ. ಜಿಲ್ಲೆಯ ಹೋರ್ತಿ ಸೇರಿದಂತೆ ಅನೇಕ ಭಾಗಗಳಲ್ಲಿ ರೈತರು ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ ,ದಾಳಿಂಬೆ.ಲಿಂಬೆ ಬೆಳೆಯುತ್ತಾರೆ. ಹೋರ್ತಿ ಭಾಗ ಎತ್ತರ ಪ್ರದೇಶ ನೀರಾವರಿ ಯೋಜನೆ ಆಗುವುದಿಲ್ಲ ಎಂದು ಹಿಂದೆ ಕೈಬಿಟ್ಟಿದ್ದರು ರೈತರ ಕಳಕಳಿ ಈ ಭಾಗದಲ್ಲಿ ಸಾಕಷ್ಟು ಹೋರಾಟಗಳು ಆಗಿವೆ ಇದನ್ನು ಅರಿತು ನಾನು ಈ ಹಿಂದೇ ನೀರಾವರಿ ಮಂತ್ರಿಯಾಗಿದ್ದಾಗ ಅಣಚಿ ಕೆರೆತುಂಬುವ ಯೋಜನೆ ಮಾಡಿದ್ದೇನೆ. ಶಾಸಕ ಯಶವಂತರಾಯಗೌಡ ಪಾಟೀಲ, ಬಸವನಗೌಡ ಪಾಟೀಲ ವಿಧಾನ ಸಭೆ ಅಧಿವೇಶನದಲ್ಲಿ ಈ ಭಾಗದ ರೈತರ ಜ್ವಲಂತ ಸಮಸ್ಯಗಳ ಹೇಳಿದಾಗ ಕಣ್ಣಾರೆ ಕಂಡ ನಾನು ಬದ್ದತೆಯಿಂದ ಮಾತುಕೊಟ್ಟಂತೆ ಶ್ರೀರೇವಣಸಿದ್ದ ಏತನೀರಾವರಿ ಯೋಜನೆ ಟೆಂಡರ್ ಮಾಡಿ ಹಣಕಾಸಿನ ಮಂಜೂರಾತಿ ಪಡೇದು ನಿಮ್ಮ ಬಳಿ ಬಂದಿರುವೆ ಸುಳ್ಳು ಹೇಳುವ ಜಾಯಮಾನ ನಮ್ಮದಲ್ಲ. ಚುನಾವಣೆ ಬರುತ್ತವೆ ಹೋಗುತ್ತವೆ. ಬದುಕು ಶಾಶ್ವತ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಜನರ ಬದುಕನ್ನು ಉನ್ನತ ಮಟ್ಟಕ್ಕೆ ಒಯ್ಯುವದು ನನ್ನ ಬದ್ದತೆ. ಇತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡಿದ್ದಾರೆ ,ನನ್ನಿಂದಲೆ ಎಲ್ಲಾ ಎನ್ನು ಸ್ಥಿತಿ ಬಂದು ಬಿಟ್ಟಿದೆ. ಜನರ ಬಗ್ಗೆ ಭಯ ,ಪ್ರೀತಿ ಇಟ್ಟಕೊಂಡು ರಾಜಕಾರಣ ಮಾಡಬೇಕು ಒಳ್ಳೇಯದಾಗುತ್ತದೆ ಮೂರು ಬಿಟ್ಟು ರಾಜಕಾರಣ ಮಾಡಿದರೆ ಜನ ಆರ್ಶೀವಾದ ಮಾಡುವುದಿಲ್ಲ ಎಂದರು.
ಸಂಸದ ರಮೇಶ ಜಿಗಜಿಣಗಿ , ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಾಸಕ ಯಶವಂತರಾಯಗೌಡ ಪಾಟೀಲ, ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಹಣಮಂತ ನೀರಾಣಿ, ಸಿಂದಗಿ ಶಾಸಕ ರಮೇಶ ಭೂಸನೂರ, ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಶಾಸಕ ಮುರುಗೇಶ ನೀರಾಣಿ, ಮಾಜಿ ಸಚಿವ ಅಪ್ಪಾಸಾಬ ಪಟ್ಟಣಶೆಟ್ಟಿ, ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಗ್ರಾ. ಪಂ ಅಧ್ಯಕ್ಷ ರೇವಣಸಿದ್ದ ತೇಲಿ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಎಂ.ಎಸ್ ರುದ್ರಗೌಡರ್, ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ರಾಹುಲ ಸಿಂಧೆ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ,ಬಿ ಕುಲಕರ್ಣಿ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್ ಶಿವುಕುಮಾರ, ಮುಖ್ಯ ಇಂಜಿನಿಯರ್ ಹೆಚ್ ಸುರೇಶ ಉಪಸ್ಥಿತರಿದ್ದರು.
ನೀರಾವರಿ ಯೋಜನೆಯಲ್ಲಿ 20 ಗ್ರಾಮಗಳು ಬೇರೆ ಕಡೆ ಸ್ಥಳಾಂತರ ಮಾಡಬೇಕು ಜಾಗ ಕೊಡುವುದು ಜಾಗ ಕೊಟ್ಟರೆ ಸಾಲದ ಭೂಮಿಯನ್ನು ಕಳೆದು ಕೊಂಡವರಿಗೆ ಮನೆ ಕಟ್ಟುವ ತೀರ್ಮಾಣಕ್ಕೆ ಬರಲಾಗಿದೆ ಇದರ ಜೊತೆ ಒಂದು ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳು ಒದಗಿಸಿ ಕೊಟ್ಟು ರೈತರ ಬದುಕು ಉತ್ತಮ ಮಾಡುವ ಗುರಿ ಹೊಂದಲಾಗಿದೆ.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ
ಅಣ್ಣಪ್ಪ ಖೈನೂರ ಸೇರಿದಂತೆ ಹೋರ್ತಿ ಭಾಗದ ರೈತಾಪಿ ವರ್ಗದ ಅನೇಕ ವರ್ಷಗಳ ಹೋರಾಟ ಬೇಡಿಕೆ ಇಡೇರಿರುವುದು ಸಂತಸ ತಂದಿದೆ. ಈ ಹಿಂದೆ ಯಶವಂತರಾಯಗೌಡ ಪಾಟೀಲ ಈ ಭಾಗದ ನೀರಾವರಿ ಸಮಸ್ಯ ಕುರಿತು ವಿಧಾನಸಭೆಯಲ್ಲಿ ಪ್ರಶ್ನಿಸಿ ನಮ್ಮದೇ ಕಾಂಗ್ರೆಸ್ ಸರಕಾರ ಹಾಗೂ ನಮ್ಮವರೆ ನೀರಾವರಿ ಸಚಿವರಾಗಿದ್ದರೂ ಅವಧಿಯಲ್ಲಿ ಈ ಭಾಗದ ನೀರಾವರಿ ಯೋಜನೆ ಆಗಿರಲ್ಲಿಲ್ಲ ಇವರ ಜೊತೆ ಶಾಸಕ ಬಸವನಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಕೂಡಾ ನೀರಾವರಿ ಆಗಲೇಬೇಕು ಎಂದು ಮನವಿ ಮಾಡಿಕೊಂಡಾಗ ನಾನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶ್ರೀರೇವಣಸಿದ್ದೇಶ್ವರ ಏತನೀರಾವರಿ ಕುರಿತು ತಿಳಿಸಿದೆ ಮುಖ್ಯ ಮಂತ್ರಿಗಳು ಅಂದಾಜು ಹಣ ಎಷ್‍ಟು ಬೇಕು ಹೇಳಿ ಎಂದಾಗ 3 ಸಾವಿ ಕೋಟಿ ಆಗುತ್ತದೆ ಎಂದು ಹೇಳಿದೆ ಆದರೆ ಮುಖ್ಯ ಮಂತ್ರಿಗಳು 3 ಹಂತಗಳಲ್ಲಿ ಮಾಡೋಣ ಎಂದು ಆಶ್ವಾಸನೆ ನೀಡಿ ತಕ್ಷಣ ಮಂಜೂರಾತಿ ಹಣ ಬಿಡುಗಡೆ ಮಾಡಿದ ಕೀರ್ತಿ ಮುಖ್ಯ ಮಂತ್ರಿಗಳಿಗೆ ಸಲ್ಲುತ್ತದೆ. ಚುನಾವಣೆ ನೋಡಿ ರಾಜಕಾರ ಮಾಡುವುದು ನನ್ನ ರಕ್ತದಲ್ಲಿ ಬಂದಿಲ್ಲ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು ಹನಿ ನೀರಿಗಾಗಿ ನಾನೂ ತೀರುಗಾಡಿದ ಅನುಭವ ಇದೆ ,ನೀರಾವರಿ ಯೋಜನೆಗೆ ರೈತಾಪಿ ವರ್ಗ ಯಾವುದೇ ಅಡೆ ತಡೆ ಮಾಡಬಾರದು.
ಜಲಸಂಪನ್ಮೊಲ ಸಚಿವ ಗೋವಿಂದ ಕಾರಜೋಳ.