80 ಜನರ ಉಚಿತ ಆರೋಗ್ಯ ತಪಾಸಣೆ

ಬೀದರ್: ಜು.20:ರೆನಿಟಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಇಲ್ಲಿಯ ಶಿವನಗರ ಬಳಿಯ ಪಾದಚಾರಿ ಮಾರ್ಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 80 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.

ರಕ್ತದೊತ್ತಡ, ಮಧುಮೇಹ, ಪಲ್ಸ್, ಆಮ್ಲಜನಕ ಪ್ರಮಾಣದ ತಪಾಸಣೆ ನಡೆಸಲಾಯಿತು.

ಬಡ ಜನರಿಗೆ ನೆರವಾಗಲು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲೆಯವರೇ ಆದ ರೆನಿಟಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಪ್ರದೀಪಕುಮಾರ ಹೇಳಿದರು.

ಹೈದರಾಬಾದ್‍ನಲ್ಲಿ ಮುಖ್ಯ ಕಚೇರಿ ಹೊಂದಿರುವ ರೆನಿಟಾ ಹೆಲ್ತ್‍ಕೇರ್ ಪ್ರೈವೇಟ್ ಲಿಮಿಟೆಡ್, ಬೀದರ್‍ನಲ್ಲೂ ಶಾಖೆ ಆರಂಭಿಸಿದೆ. ಜಿಲ್ಲೆಗೆ ಮನೆ ವೈದ್ಯಕೀಯ ಸೇವೆ ಪರಿಚಯಿಸಿದ ಶ್ರೇಯಸ್ಸಿಗೆ ಪಾತ್ರವಾಗಿದೆ ಎಂದು ತಿಳಿಸಿದರು.

ವಯಸ್ಸಾದ, ನಡೆಯಲು ಬಾರದ ರೋಗಿಗಳಿಗೆ ಮನೆಯಲ್ಲೇ ಗ್ಲುಕೋಸ್, ಐವಿಐಎಂ ಇಂಜಕ್ಷನ್, ಗಾಯ ನಿವಾರಣೆ, ನರ್ಸಿಂಗ್ ಕೇರ್, ದಿನದ 24 ಗಂಟೆ ಆರೈಕೆ ಮೊದಲಾದ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕಿ ರಚೆಲ್, ವ್ಯವಸ್ಥಾಪಕ ನಿರ್ದೇಶಕ ವೇದಪ್ರಕಾಶ, ಪ್ರಮುಖರಾದ ಮಲಕಿಪ್ರಕಾಶ ಇದ್ದರು.