80 ಅಂಗವಿಕಲ ಮತದಾರರಿಗೆ ಅಂಚೆ ಮತದಾನ ಏ.29 ರಿಂದ ಆರಂಭ


ಸಂಜೆವಾಣಿ ವಾರ್ತೆ
ಯಲಬುರ್ಗಾ, ಏ.28: ಅಂಗವಿಕಲ ಮತ್ತು ಹಿರಿಯ ನಾಗರಿಕರಿಗೆ ಅಂಚೆ ಮತದಾನದ ವ್ಯವಸ್ಥೆಗಾಗಿ ಕಾರ್ಯಕ್ರಮ ರೂಪಿಸಿದ್ದು, ದಿನಾಂಕ 29/4/2023 ರಿಂದ 5/5/2023 ರವರೆಗೆ ಎರಡು ಭೇಟಿ ಅವಧಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾನ್ಯ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ ಹೇಳಿದರು.
ಇಂದು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
63 ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 423 ಹಿರಿಯ, ಅಂಗವಿಕಲ ನಾಗರೀಕರ ಅಂಚೆ ಮತದಾನ ಕೋರಿ 12 ಡಿ ಅರ್ಜಿ ಸ್ವೀಕೃತವಾಗಿವೆ. ಪ್ರತಿ ಮತದಾರರ ಮನೆ ಮನೆಗೆ 10 ಮೊಬೈಲ್ ಪಿವಿಸಿ ಮೂಲಕ ಮತದಾನವನ್ನು ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಮತದಾರರಿಗೆ ಚುನಾವಣೆ ಅರಿವು ಮೂಡಿಸಲು ತಿಳುವಳಿಕೆ ಪತ್ರದ ಮೂಲಕ ಮನೆಯಲ್ಲಿರಲು ಮನವಿ ಮಾಡಿರುತ್ತಾರೆ.
ಪ್ರತಿ ಮತಗಟ್ಟೆಯ ಬಿಎಲ್ಒ ಮುಖಾಂತರ ತಿಳುವಳಿಕೆ ಪತ್ರ ನೀಡಲು ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ತಹಶೀಲ್ದಾರ್ ನೀಲಪ್ರಭಾ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.