8 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಫೆ.29-ಮನೆಯ ಅಲಮಾರದಲ್ಲಿಟ್ಟಿದ್ದ 7.20 ಲಕ್ಷ ರೂ.ಮೌಲ್ಯದ 120 ಗ್ರಾಂ.ಚಿನ್ನಾಭರಣ ಮತ್ತು 80 ಸಾವಿರ ರೂ.ನಗದು ಕಳವಾದ ಘಟನೆ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
ಮನೆಯ ಅಲಮಾರಿಯಲ್ಲಿಟ್ಟಿದ್ದ 80 ಸಾವಿರ ರೂ.ನಗದು, 1.80 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಬ್ರಾಸ್‍ಲೇಟ್, 30 ಗ್ರಾಂ.ಬಂಗಾರದ 1.80 ಲಕ್ಷ ರೂ.ಮೌಲ್ಯದ 6 ಸುತ್ತುಂಗರ, 1.50 ಲಕ್ಷ ರೂ.ಮೌಲ್ಯದ 25 ಗ್ರಾಂ.ಬಂಗಾರದ ಮಂಗಲಸೂತ್ರ, 90 ಸಾವಿರ ರೂ.ಮೌಲ್ಯದ 15 ಗ್ರಾಂ.ಬಂಗಾರದ ಲಾಕೇಟ್,60 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೇಟ್ ಸೇರಿ 7.20 ಲಕ್ಷ ರೂ.ಮೌಲ್ಯದ 120 ಗ್ರಾಂ.ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ವೀಣಾದೇವಿ ಬಜರಂಗಿ ಪೂಜಾರಿ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.