8 ಲಕ್ಷ ರೂ ಅಕ್ಕಿ ವಶ

ಇಂಡಿ:ಡಿ.10:ಇಂಡಿಯ ಅಹಾರ ನಿರೀಕ್ಷಕ ಪರಮಾನಂದ ಹೂಗಾರ ಇವರ ನೇತೃತ್ವದಲ್ಲಿ ಹಠತ್ತನೆ ದಾಳಿ ಮಾಡಿ 8 ಲಕ್ಷ ರೂ ಮೌಲ್ಯದ ಅಕ್ಕಿ ವಶ ಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರೆ ಮೇಲೆ ಬಸನಾಳ ಪೆಟ್ರೋಲ ಬಂಕ ಹತ್ತಿರ ಹೊರ್ತಿ ಸಮೀಪ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿ ಸಾಗುತ್ತಿದ್ದ 571 ಚೀಲ ಅಕ್ಕಿ ಅಂದಾಜು 28395 ಕೆಜಿ ಇದ್ದು ಅದರ ಬೆಲೆ 8 ಲಕ್ಷ 23310 ರೂ ಇದೆ.
ಹೊರ್ತಿಯ ಕ್ರೈಂ ಪಿಎಸ್ ಐ ಎಸ್.ಎಚ್.ಮಾಳೆಗಾಂವ ಮತ್ತು ಇತರೆ ಪೋಲಿಸ ಸಿಬ್ಬಂದಿ ದಾಳಿಯಲ್ಲಿ ಇದ್ದರು.
ಲಾರಿ ಅಕ್ಕಿ ತುಂಬಿಕೊಂಡು ಇಂಡಿ ಅಥವಾ ಚಡಚಣ ತಾಲೂಕಿನಿಂದ ವಿಜಯಪುರ ಕಡೆಗೆ ಹೊರಟಾಗ ದಾಳಿ ನಡೆದಿದೆ. ಈ ಕುರಿತು ಹೋರ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.