8 ಮಂದಿ ದರೋಡೆಕೋರರ ಬಂಧನ

ಮೈಸೂರು, ಸೆ.16- ರಿಂಗ್ ರಸ್ತೆಯಲ್ಲಿ ಹೊಂಚುಹಾಕಿ, ಸಾರ್ವಜನಿಕರು ಹಾಗೂ ವಾಹನ ಸವಾರರನ್ನೇ ಗುರಿಯಾಗಿಸಿಕೊಂಡು ಅವರಿಂದ ಹಣ-ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ದರೋಡೆಕೋರರ ತಂಡವೊಂದರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವ ಸರಸ್ವತಿಪುರಂ ಠಾಣಾ ಪೊಲೀಸರು, ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತಿದ್ದ ವಾಹನ ಹಾಗೂ ಮಾರಕಾಸ್ತ್ರಗಳನ್ನು ದಸ್ತಗಿರಿ ಮಾಡಿಕೊಂಡಿದ್ದಾರೆ.
ಶರತ್ ಬಿನ್ ಸೋಮೇಗೌಡ, ಸುಮಂತ್ @ಸುಮೋ ಬಿನ್ ರಮೇಶ್, ಧರ್ಮೇಶ್ @ಕರಿಯ ಬಿನ್ ವೆಂಕಟೇಶ್, ದಿನೇಶ್ @ದಿನಿ ಬಿನ್ ಮರಿಸ್ವಾಮಿ, ಸುನಿಲ್ ಕುಮಾರ್ ಬಿನ್ ಈಶ್ವರಾಚಾರ್, ಶಶಾಂಕ್ @ತೇಜಸ್ @ಆಫೀಸಿಯಲ್ ಬಿನ್ ಸತ್ಯನಾರಾಯಣ್, ಕಾರ್ತೀಕ್ ಬಿನ್ ಶಿವಣ್ಣ, ಮಹದೇವ್ ಬಿನ್ ಚಂದ್ರೇಗೌಡ ಬಂಧಿತ ದರೋಡೆಕೋರರು.
ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ದಡೋಡೆಗೆ ಹೊಂಚು ಸೇರಿದಂತೆ ಒಟ್ಟು ಐದು ಬೇರೆ-ಬೇರೆ ಪ್ರಕರಣಗಳು ಸಹ ಬೆಳಕಿಗೆ ಬಂದಿದೆ. ಸರಸ್ವತಿಪುರಂ, ವಿದ್ಯಾರಣ್ಯಪುರಂ, ಲಕ್ಷ್ಮಿಪುರಂ ಹಾಗೂ ವಿಜಯನಗರ ಪೆÇಲೀಸ್ ಠಾಣೆಯ ಪ್ರತ್ಯೇಕ ರಾಬರಿ ಪ್ರಕರಣಗಳು ಮತ್ತು ಕೆ.ಆರ್.ಪೆÇಲೀಸ್ ಠಾಣೆ ವ್ಯಾಪ್ತಿಯ ಕೊಲೆಯತ್ನ ಪ್ರಕರಣ ಪತ್ತೆಯಾಗಿವೆ ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾಹಿತಿ ನೀಡಿದರು.
ಸರಸ್ವತಿಪುರಂ ಪೆÇಲೀಸ್ ಠಾಣೆಯ ಪಿಎಸ್‍ಐ ಭವ್ಯ ಅವರು ಸೆ.9ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಭೋಗಲಿಂಗೇಶ್ವರ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಓಮ್ನಿ ಕಾರಿನ ಹತ್ತಿರ ಎಂಟು ವ್ಯಕ್ತಿಗಳು ನಿಂತಿದ್ದು, ಅನುಮಾನ ಬಂದು ಎಲ್ಲರನ್ನು ವಿಚಾರಣೆಗೊಳಪಡಿಸಿದಾಗ ಇವರು ಬೋಗಾದಿ ರಿಂಗ್ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಮತ್ತು ವಾಹನ ಸವಾರರನ್ನು ಹೆದರಿಸಿ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿರುವುದು ಖಚಿತವಾದ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಈ ವೇಳೆ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮಾರುತಿ ಓಮ್ನಿ ಕಾರು (ಕೆಎ09ಎಂಜಿ385), 4ಬೈಕ್/ಸ್ಕೂಟರ್, 11ಮೊಬೈಲ್ ಫೆÇೀನ್ ಗಳು, ಒಂದು ಹಾಕಿ ಸ್ಟಿಕ್, ಎರಡು ಡ್ರಾಗನ್ ಚಾಕು, ಐದು ಮಂಕಿ ಕ್ಯಾಪ್, ಐದು ಖಾರದ ಪುಡಿ ಪ್ಯಾಕೇಟ್, ಒಂದು ರಾಡ್, ಮೂರು ವಿಕೆಟ್, ಒಂದು ಲಾಂಗ್ ಮತ್ತು 6ಸಾವಿರ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಹಾಗೂ ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕೃಷ್ಣರಾಜ ವಿಭಾಗದ ಸಹಾಯಕ ಪೆÇಲೀಸ್ ಆಯುಕ್ತರಾದ ಎಂ.ಎಸ್.ಪೂರ್ಣಚಂದ್ರತೇಜಸ್ವಿ ಉಸ್ತುವಾರಿಯಲ್ಲಿ ಸರಸ್ವತಿಪುರಂ ಪೆÇಲೀಸ್ ಠಾಣೆಯ ಪಿಐ ಆರ್.ವಿಜಯಕುಮಾರ್, ಕುವೆಂಪುನಗರ ಪೆÇಲೀಸ್ ಠಾಣೆಯ ಪಿಐ ಜಿ.ಸಿ.ರಾಜು, ಸರಸ್ವತಿಪುರಂಪೆÇಲೀಸ್ ಠಾಣೆಯ ಪಿಐ ಭವ್ಯ ಎನ್, ಅಪರಾಧ ವಿಭಾಗದ ಸಿಬ್ಬಂದಿ ಎಎಸ್ ಐ ಕರುಣಾಕರ ಬಸವರಾಜೇ ಅರಸ್, ಪ್ರಕಾಶ್, ರಾಘವೇಂದ್ರ, ಅರ್ಜುನ್, ಕುಮಾರ್, ಹರೀಶ್ ಕುಮಾರ್, ನಟರಾಜ ಮತ್ತು ಕೆ.ಆರ್.ಉಪವಿಭಾಗದ ಅಪರಾದ ಪತ್ತೆದಳದ ಸಿಬ್ಬಂದಿಗಳು ಆರೋಪಿಗಳನ್ನು ಮತ್ತು ಮಾಲುಗಳನ್ನು ಪತ್ತೆ ಮಾಡಲು ಶ್ರಮಿಸಿದ್ದು, ಅವರ ಕಾರ್ಯವನ್ನು ಶ್ಲಾಘಿಸಿದರು.