8 ಬಾರಿ ಭಾವಚಿತ್ರ ತೆಗೆದುಕೊಂಡರು ಬಾರದ ಆಧಾರಕಾರ್ಡ

ವಾಡಿ: ನ.2:ಪಟ್ಟಣ ಸಮೀಪದ ರಾವೂರ ಗ್ರಾಮದ ನಿವಾಸಿಯಾದ ಈರಮ್ಮಾ ಮಲ್ಲಿಕಾರ್ಜುನ ಕೊಳ್ಳಿ ಎನ್ನುವ ಮಹಿಳೆಯು 06 ಮೇ, 08 ಸೆಪ್ಟೆಂಬರ್, 11 ಡಿಸೆಂಬರ್ 2016, 02 ಫೆಬ್ರವರಿ, 03 ಮಾರ್ಚ, 01 ಅಗಷ್ಟ 2017 ರಿಂದ ಇಲ್ಲಿಯವರೆಗೆ ಆಧಾರಕಾರ್ಡ ಒಪ್ಪಿಗೆಗಾಗಿ, ವಾಡಿ, ಚಿತ್ತಾಪೂರ ಸೇರಿದಂತೆ ಇನ್ನೀತರ ಕಡೆ ಅಲೆದು 8 ಭಾರಿ ಭಾವಚಿತ್ರ ತೆಗೆದುಕೊಂಡರು ಆಧಾರಕಾರ್ಡ ಸಿಗದೆ ಅರ್ಜಿ ತಿರಸ್ಕøತಗೊಳ್ಳುತ್ತಿದೆ.

ಇದರಿಂದ ಈ ಮಹಿಳೆಯ ರೇಷನ ಕಾರ್ಡ, ಉದ್ಯೋಗಖಾತ್ರಿ, ಜಾತಿ ಪ್ರಮಾಣಪತ್ರ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಲಾಭದಿಂದ ವಂಚಿತ ಆಗಿದ್ದಾಳೆ. ಅಲ್ಲದೆ ದಿನನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೇದಾಡುವ ಪರಿಸ್ಥಿತಿ ಎದುರಾಗಿದೆ. ಆಧಾರ ಅಧಿಕಾರಿಗಳಿಂದ ಸರಿಯಾದ ಉತ್ತರ ಸಿಗದೆ ಇರುವ ಕಾರಣ ಮಹಿಳೆ ಬೆಸೆತ್ತಿದ್ದಾಳೆ. ಭಾರತ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ. ಇಲ್ಲವಾದಲ್ಲಿ ನೊಂದ ಮಹಿಳೆಯೊಂದಿಗೆ ತಹಸೀಲ ಕಛೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ರಾವೂರ ಕರವೇ ಉಪಾಧ್ಯಕ್ಷ ಜಗದೇಶ ಪೂಜಾರಿ ಎಚ್ಚರಿಕೆ ನೀಡಿರುತ್ತಾರೆ.