8 ತಿಂಗಳ ಬಳಿಕ ಮಹಿಳಾ ವಿವಿಯಲ್ಲಿ ಪಾಠ ಪ್ರಾರಂಭಃ ಡಾ. ಓಂಕಾರ ಕಾಕಡೆ

ವಿಜಯಪುರ, ನ.5-ಕೊರೊನಾ ಮಹಾಮಾರಿ ಯಿಂದ ಕಳೆದ 8 ತಿಂಗಳಿಂದ ಬಂದ್ ಆಗಿದ್ದ ವಿಶ್ವವಿದ್ಯಾಲಯ ನವೆಂಬರ್ 17 ರಿಂದ ಪ್ರಾರಂಭವಾಗಲಿದೆ. ರಾಜ್ಯದ ಏಕೈಕ ಅಕ್ಕಮ ಹಾದೇವಿ ವಿಶ್ವವಿದ್ಯಾಲಯ ಇದೇ ನವೆಂಬರ್ 17 ರಿಂದ ತನ್ನ ಎಲ್ಲ ಕಾರ್ಯಾ ಚಟುವಟಿಕೆಗ ಳನ್ನು ಪುನ: ಆರಂಭಗೊಳಿಸಲಿದೆ. ಪದವಿ, ಸ್ನಾತಕೋತ್ತರ ಪದವಿ ಪಾಠಗಳು ಎಂದಿನಂತೆ ಆರಂಭಗೊಳ್ಳಲಿವೆ ಎಂದು ಹಂಗಾಮಿ ಕುಲಪತಿ ಡಾ. ಓಂಕಾರ ಕಾಕಡೆ ತಿಳಿಸಿದ್ದಾರೆ.
ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಎಲ್ಲ ಕಾಲೇಜುಗಳು, ಮಂಡ್ಯ, ಸಿಂಧನೂರ, ಉಡತಡಿ ಮಹಿಳಾ ವಿವಿ ಕ್ಯಾಂಪಸ್ಗಳು ಆರಂಭಗೊಳ್ಳಲಿವೆ. ಈ ಸಂಬಂಧ ಎಲ್ಲ ಕಾಲೇಜು ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ. ಇದರ ಜತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸಹ ಅಧಿಸೂಚನೆ ಹೊರಡಿಸಲಾಗಿದೆ. ಮಹಿಳಾ ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳ ಆವರಣ, ತರಗತಿಗಳನ್ನು ಶುಚಿಯಾಗಿಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಕೊವಿಡ್-95 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ವಿದ್ಯಾರ್ಥಿನಿಯರು ಸಹ ನ.17ರಿಂದ ಎಂದಿನಂತೆ ತರಗತಿಗಳಿಗೆ ಹಾಜರಾಗ ಬೇಕು ಎಂದು ಸೂಚನೆ ನೀಡಲಾಗಿದೆ. ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿನಿಯರು ಸ್ಯಾನಿಟೇಜರ್, ಮಾಸ್ಕ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.