8 ಜನರ ಕಚ್ಚಿದ ನಾಯಿ

ಕಲಬುರಗಿ,ಜ.20: ನಗರದ ವಾರ್ಡ ಸಂಖ್ಯೆ 35 ರಲ್ಲಿ ನಾಯಿಯೊಂದು 8 ಜನರನ್ನು ಕಚ್ಚಿ ಗಾಯಗೊಳಿಸಿದೆ. ಇತ್ತೀಚಿಗೆ ನಗರದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವಾರ್ಡ ಸಂಖ್ಯೆ 35ರ ಮಹಾನಗರ ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ,ವಾರ್ಡ ಸಂಖ್ಯೆ 35ರಲ್ಲಿ ಬೀದಿನಾಯಿಗಳ ಉಪಟಳದ ಬಗ್ಗೆ ಹಲವಾರು ಬಾರಿ ಪಾಲಿಕೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಒಂದು ವೇಳೆ ತಕ್ಷಣ ಸೂಕ್ತಕ್ರಮ ಕೈಗೊಳ್ಳದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ಅವರು ತಿಳಿಸಿದ್ದಾರೆ.