ಹುಬ್ಬಳ್ಳಿಯ ಇದಾರ-ಏ-ಖಿದ್ಮತೆ ಖಲ್ಕ ಇವರ ವತಿಯಿಂದ ಪೀರೆ ತರೀಕತ್ ಹಜರತ್ ಅಲ್ಲಾಮಾ ಸಯ್ಯದ್ ಅಹ್ಮದ್ ರಜಾ ಸರ್ ಖಾಜಿಯವರ ಅಧ್ಯಕ್ಷತೆಯಲ್ಲಿ ಮಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಈದ್ ಮಿಲಾದ್ ಪ್ರಯುಕ್ತ ಹುಬ್ಬಳ್ಳಿಯ ವೃದ್ಧಶ್ರಮಕ್ಕೆ ಭೇಟಿ ನೀಡಿ ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಈದ್ ಮಿಲಾದ್ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಲ್ಹಾಜ ಅಬ್ದುಲ್ ಹಮೀದ್ ಖೈರಾತಿ, ಅಲ್ಲಾಮಾ ಸಯ್ಯದ್ ಅಹ್ಮದ್, ಅಬ್ದುಲ್ ಹಮೀದ್ ಖೈರಾತಿ, ಮೌಲಾನಾ ನಯೀಮುದ್ದೀನ ಆಶ್ರಪಿ, ಹಾಫಿಜ ಅಲೀಮುದ್ದೀನ್, ಸಮೀಉಲ್ಲಾ ಬೆಲಗಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.