ಮಾನಸಿಕ ಅನಾರೋಗ್ಯಕ್ಕೆ ದಿವ್ಯ ಔಷಧಿ ಸಂಗೀತ ಕಲಾಪ್ರಕಾರ 

ಸಂಜೆವಾಣಿ ವಾರ್ತೆ

ದಾವಣಗೆರೆ-ಡಿ.31; ಯಾವುದೇ ಸಂಘಟನೆಗಳು ನಿರಂತರವಾಗಿ ಸುಲಲಿತವಾಗಿ ನಡೆದುಕೊಂಡು ಹೋಗಬೇಕಾದರೆ ಸಂಕುಚಿತ ಭಾವನೆ ಹೊರತುಪಡಿಸಿ ವಿಶಾಲವಾದ ಸೇವಾ ಮನೋಭಾವನೆಯೊಂದಿಗೆ ತಾಳ್ಮೆಯಿಂದ ತೊಡಗಿಸಿಕೊಂಡಾಗ ಸಂಸ್ಥೆಗಳು ಸುಸಜ್ಜಿತವಾಗಿರುತ್ತದೆ. ಮಾನಸಿಕ ಖಿನ್ನತೆಯ ಅನಾರೋಗ್ಯಕ್ಕೆ ದಿವ್ಯ ಔಷಧಿ, ಸಂಗೀತ ಕಲಾಪ್ರಕಾರಗಳು ಮಾನವ ಜತೆಗೆ ಪ್ರಾಣಿ ಪಕ್ಷಿಗಳು ಹಿಂದೂಸ್ತಾನಿ, ಕರ್ನಾಟಕ, ಗಮಕ, ಸಂಗೀತಗಳ ಪ್ರಕಾರದಂತೆ ಏರಿಳಿತದ ಧ್ವನಿ, ಸಿರಿಕಂಠ, ತಾಳ, ಶೃತಿಗಳೊಂದಿಗೆ ಶಿಸ್ತುಬದ್ದವಾಗಿ ಹಾಡುವ ಕ್ರಮದ ಅನುಕರಣೆ ಜತೆಗೆ ಸುಲಭವಾಗಿ ಹಾಡುವ ಸಂಗೀತ ಕಲೆ ಸುಗಮ ಸಂಗೀತ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್‌ಶೆಣೈ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ತಾಲ್ಲೂಕು ಘಟಕದ 2023-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇತ್ತೀಚಿಗೆ ಹರಿಹರದ ಗಿರಿಯಮ್ಮ ಪದವಿ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಶೆಣೈಯವರು ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರತಿಜ್ಞಾವಿಧಿ ಬೋಧಿಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಸಂಗೀತ ಕಲಾವಿದರು, ಹರಿಹರದ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಎ.ಉಮಾ, ಹವ್ಯಾಸಿ ಹಿರಿಯ ಗಾಯಕ, ಹರಿಹರ ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ರೇವಣಸಿದ್ದಪ್ಪ, ಗಾಯಕರು, ಉದ್ಯಮಿಗಳಾದ ಡಿ.ಕುಮಾರ್, ಹಿರಿಯ ಗಾಯಕ, ಉದ್ಯಮಿಗಳಾದ ಸುಭಾಷ್ ಬೊಂಗಾಳೆ, ಪರಿಷತ್‌ನ ಹರಿಹರ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾದ ಶಿವಕುಮಾರ ಬಿ.ಕರಡಿ, ನೂತನ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಶೇಷಗಿರಿಯವರು ಮಾತನಾಡಿ, ಈ ಪರಿಷತ್ತಿನ ಹರಿಹರ ಘಟಕದಿಂದ ಕರ್ನಾಟಕದಲ್ಲಿ ಅದ್ದೂರಿಯಗಿ ಕಾರ್ಯಕ್ರಮಗಳನ್ನು ನಡೆಸಿ ಹರಿಹರಕ್ಕೆ ಹೆಸರು ತರಬೇಕಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯಲ್ಲಿ ಸಹಕಾರ ಸಹಯೋಗ ನೀಡುತ್ತೇವೆ ಎಂದರು.