ನಗರದ ಹಲಸೂರು ಪ್ರದೇಶದಲ್ಲಿ ಏಕಾಏಕಿ ವೈಟ್ ಟಾಪಿಂಗ್ ನೆಲಕ್ಕೆ ಕುಸಿದು ಆಳವಾದ ಗುಂಡಿ ಬಿದ್ದಿದ್ದು, ಈ ಮಹಾ ಗುಂಡಿಗೆ ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೂಗಳನ್ನು ಹಾಕಿ ಮಹಾ ಪೂಜೆ ನೆರವೇರಿಸಿ ವಿನೂತನ ರೀತಿ ಪ್ರತಿಭಟಿಸಿದರು.