ನೆನಪು: ಇತ್ತೀಚೆಗೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ವಿಜಯಪುರ ಸರ್ವೋದಯ ಮಂಡಲ ವತಿಯಿಂದ ಡಾ.ಎಂ. ಲೀಲಾವತಿ ರವರಿಗೆ ಅವರ ಸ್ವಗೃಹದಲ್ಲಿ ಕನ್ನಡ ಕ್ಕೊಬ್ಬರೆ ಅಭಿನಯ ಸರಸ್ವತಿ ಕಲಾ ಕೊವಿದೆ ಎಂಬ ಬಿರುದು ನೀಡಿ ಇವರನ್ನು ಸನ್ಮಾನ ಪತ್ರ ದೊಂದಿಗೆ ಸನ್ಮಾನಿಸಲಾಯಿತು. ಚಿತ್ರದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಡಾ.ವಿ.ಪ್ರಶಾಂತ, ಕನ್ನಡ ಚಿತ್ರರಂಗದ ನಾಯಕ ನಟ ವಿನೋದ್ ರಾಜ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ಪೂರ್ವ ನೆಲಮಂಗಲ ತಾಲ್ಲೂಕು ರಾಷ್ಟ್ರೀಯ ಸ್ವಯಂ ಸೇವಕ ವಿನಯ್ ಮೊದಲಾದವರು ಹಾಜರಿದ್ದರು.