ಜಿಲ್ಲಾ ಮಟ್ಟದ ೨೦೨೩ ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ವಿಜಯಪುರ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ನಾಗೇಶ್ ಅವರು ೧೦೦ ಮೀ ಓಟದಲ್ಲಿ ಪ್ರಥಮ, ೨೦೦ ಮೀ ಓಟದಲ್ಲಿ ದ್ವಿತೀಯ, ೪೦೦ ಮೀ ಓಟದಲ್ಲಿ ಪ್ರಥಮ, ೧೦೦x೪ ಮೀ ಓಟದಲ್ಲಿ ದ್ವಿತೀಯ, ೧೦೦x೪ ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿದ್ದು, ಪೊಲೀಸ್ ಇಲಾಖೆಯ ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರವಿಕಾಂತೇಗೌಡ ಅವರು ಬಹುಮಾನ ವಿತರಣೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಪುರುಷೋತ್ತಮ್, ಪೊಲೀಸ್ ಇನ್ ಸ್ಪೆಕ್ಟರ್ ಪ್ರಶಾಂತ್ ನಾಯಕ್ ಅವರು ಅಭಿನಂದಿಸಿದರು.