ಯಲಹಂಕ ಉಪನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯ ಕಾಮಗಾರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಇಂದು ಚಾಲನೆ ನೀಡಿದರು. ಈ ವೇಳೆ ಹಿಂದುಳಿದ ವರ್ಗಗಳ ಬೆಂ.ನಗರ ಜಿಲ್ಲಾ ಉಪನಿರ್ದೇಶಕ ಲಕ್ಷ್ಮಣ ರೆಡ್ಡಿ, ಬಿಬಿಎಪಿ ಮಾಜಿ ಸದಸ್ಯ ಎಂ.ಸತೀಶ್, ಬಿಜೆಪಿ ಮುಖಂಡರಾದ ವೈ.ಜಿ.ವಸಂತ್,ಮುರಳಿ, ವೀರಭದ್ರಗೌಡ, ಮಹಿಳಾ ಮುಖಂಡರಾದ ಬೃಂದಾ ವೀರೇಶ್,ಬಬಿತಾ ಪೈ ಸೇರಿ ಇನ್ನಿತರರಿದ್ದರು.