ನಗರದ ಜೈಭೀಮ್ ನಗರದಲ್ಲಿರುವ ಸಿದ್ಧಾರ್ಥ ಸೇವಾ ಸಂಘದ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ ಭವನದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ರವರ ಮಹಾಪರಿನಿರ್ವಾಣ ದಿನದಂದು ಗೌರವ ಸಮರ್ಪಿಸಲಾಯಿತು. ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು, ಪೊಲೀಸ್ ಅಧಿಕಾರಿ ಎಂ.ಎಸ್. ಜಯವಾಡಗಿ, ವಿರುಪಾಕ್ಷ ಚಲವಾದಿ, ಬಸವರಾಜ ಪಾಟೀಲ, ಗಜಾನನ ಕಬಾಡೆ, ಶಂಕರ ಭೋಜಗಾರ, ಗುರುನಾಥ ಕ್ವಾಟಿ ಮತ್ತಿತರರು ಇದ್ದರು.