ರನ್ ಫಾರ್ ನೇಚರ್ ಅಭಿಯಾನದ ಅಂಗವಾಗಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಕೋಲ್ ಇಂಡಿಯಾ ಲಿಮಿಟೆಡ್ ಅಔಂಐ IಓಆIಂ ಐಖಿಆ (ಅSಖ) ಸಿ ಎಸ್ ಆರ್ ಚಟುವಟಿಕೆ ಅಡಿ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಆಯ್ಕೆಯಾದ ಸ್ಥಳಗಳಲ್ಲಿ 4000 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮದ ಭಾಗವಾಗಿ ಮುರಾರ್ಜಿ ನಗರದ ಹತ್ತಿರ ರಾಯನಾಳ ಕೆರೆ ಪಕ್ಕದಲ್ಲಿ 1000 ಸಸಿಗಳ ನೆಡುವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಪಾಲಿಕೆ ಆಯುಕ್ತರಾದ ಈಶ್ವರ್ ಉಳ್ಳಾಗಡ್ಡಿ, ಮಹಾ ಪೌರ ಶ್ರೀಮತಿ ವೀಣಾ ಭಾರದ್ವಾಡ ಉಪಮಹಾಪೌರರಾದ ಸತೀಶ ಹಾನಗಲ್, ಆರೋಗ್ಯಧಿಕಾರಿಗಳಾದ ಶ್ರೀಧರ್ ದಂಡಪ್ನವರು, ಗಿಂಏ ಫೌಂಡೇಶನ್ ಸಂಸ್ಥಾಪಕರಾದ ವೆಂಕಟೇಶ್ ಕಾಟವೆ,ಮೇಘರಾಜ ಕೆರೂರ್ ಭಾಗಿಯಾಗಿದ್ದರು.