ಹುಬ್ಬಳ್ಳಿಯ ಗೋಕುಲ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್ ಮೊದಲ ಹಂತದ ಕೆ.ಎಸ್.ಎಫ್.ಸಿ ಸಭಾಭವನದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಹಮ್ಮಿಕೊಂಡ ಸಂಪರ್ಕ ಹಾಗೂ ಕುಂದು-ಕೊರತೆಗಳ ಸಭೆಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಭಾಗಿಯಾಗಿದ್ದರು. ಆರ್ಥಿಕ ವಲಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಶ್ರಮಿಸುವ ಭರವಸೆಯನ್ನು ನೀಡಿ, ಕೈಗಾರಿಕೋದ್ಯಮಿಗಳೊಂದಿಗೆ ಅವರು ಚರ್ಚಿಸಿದರು. ಈ ಸಂದರ್ಭದಲ್ಲಿ ಮಹಾಪೌರರಾದ ವೀಣಾ ಚೇತನ ಭಾರದ್ವಾಡ, ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ, ಸಂಘದ ಅಧ್ಯಕ್ಷರಾದ ಗಿರೀಶ ನಲವಡಿ, ಗೌರವ ಕಾರ್ಯದರ್ಶಿ ಶಂಕರ ಹಿರೇಮಠ, ಉಪಾಧ್ಯಕ್ಷರಾದ ಅಶೋಕ ಕುನ್ನೂರ,ಮಾಜಿ ಅಧ್ಯಕ್ಷರಾದ ಜೆ.ಸಿ. ಮಠದ,ಖಜಾಂಚಿ ರಮೇಶ ಯಾದವಾಡ ಹಾಗೂ ಸಂಘದ ಸದಸ್ಯರು ಮತ್ತು ಉದ್ದಿಮೆದಾರರು ಸೇರಿದಂತೆ ಉಪಸ್ಥಿತರಿದ್ದರು.