ಬ್ಯಾಡಗಿ ಸ್ಥಳೀಯ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ಅವರಿಗೆ ಕಳೆದ 2022-23ನೇ ಸಾಲಿನ ಬೆಸ್ಟ್ ಪ್ರೆಸಿಡೆಂಟ್ ಆಫ್ ರೋಟರಿ ಪ್ರಶಸ್ತಿ ಲಭಿಸಿದ್ದು ಬೆಳಗಾವಿಯಲ್ಲಿ ಇತ್ತೀಚೆಗೆ ಜರುಗಿದ ರೋಟರಿ ಇಂಟರನ್ಯಾಷನಲ್ ಡಿಸ್ಟ್ರಿಕ್ ಗವರ್ನರ್ ಅವಾರ್ಡ್ಸ್ ಸಮಾರಂಭದಲ್ಲಿ ಗವರ್ನರ್ ರೋ.ವೆಂಕಟೇಶ ದೇಶಪಾಂಡೆ ಅವರು ಮಂಜುನಾಥ ಉಪ್ಪಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಮಾಲತೇಶ ಉಪ್ಪಾರ, ಮಾಲತೇಶ ಅರಳೀಮಟ್ಟಿ, ವೀರೇಶ ಬಾಗೋಜಿ, ಅನಿಲಕುಮಾರ ಬೊಡ್ಡಪಾಟಿ, ಪವಾಡೆಪ್ಪ ಆಚನೂರ, ಸಿದ್ಧಲಿಂಗಯ್ಯ ಬೂದಿಹಾಳಮಠ ಇನ್ನಿತರರು ಉಪಸ್ಥಿತರಿದ್ದರು.