ನಗರದ ಮೈಸೂರು ರಸ್ತೆ ಬ್ಯಾಟರಾಯನಪುರದ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್‌ನ ಕೋಶಾಧ್ಯಕ್ಷ ಡಾ. ಪಟೇಲ್‌ಪಾಂಡು ಉದ್ಘಾಟಿಸಿದರು. ಜನತಾ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ, ಅಧ್ಯಕ್ಷ ಪ್ರೊ. ರಾಮರಾಜ್, ಕೋಶಾಧ್ಯಕ್ಷ ಬಿ.ಕೆ. ಅಶ್ವತ್ಥ ನಾರಾಯಣ, ನಿರ್ದೇಶಕ ಬಿ.ಎಂ. ಗಂಗಣ್ಣ ಇದ್ದಾರೆ.