ದೇವನಹಳ್ಳಿ ತಾಲ್ಲೂಕು ವಿಜಯಪುರ ರೋಟರಿ ವತಿಯಿಂದ ಅಧ್ಯಕ್ಷೆ ರೊಟೇರಿಯನ್ ಎ.ಎಂ.ಮಂಜುಳ ಅವರ ನೇತೃತ್ವದಲ್ಲಿ ಗುಲಾಬಿ ಆಂದೋಲನ ಜಾಥಾ ನಡೆಸಲಾಯಿತು. ಧೂಮಪಾನ ನಿಷೇಧಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ರೋಗ ಮುಕ್ತರಾಗಿ ಕ್ಯಾನ್ಸ್‌ರ್ ನಿಂದ ದೂರ ಇರುವಂತೆ ವಿದ್ಯಾರ್ಥಿಗಳು ಭಿತ್ತಿಪತ್ರಗಳನ್ನು ಹಿಡಿದು ವಿಜಯಪುರದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅರಿವು ಮೂಡಿಸಿದರು.