ನಗರದ ಬನಶಂಕರಿಯ ಐಟಿಐ ಬಡಾವಣೆಯ ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ ಕಾಲೇಜಿನ ಪ್ರಾಧ್ಯಾಪಕ, ಕವಿ ಡಾ. ಆರ್. ವಾದಿರಾಜು, ಸಂಸ್ಥೆಯ ಸಂಸ್ಥಾಪಕ ಡಾ, ಎಂ. ರುಕ್ಮಾಂಗದನಾಯ್ಡು, ಶೈಕ್ಷಣಿಕ ನಿರ್ದೇಶಕ ಪ್ರೊ. ಎಸ್.ಪಿ. ಮನೋಹರ್, ಪ್ರೊ. ವೇಣುಗೋಪಾಲ್, ಪ್ರಾಂಶುಪಾಲರಾದ ಡಾ.ಎನ್. ಉಷಾಕುಮಾರಿ ಉಪಸ್ಥಿತರಿದ್ದರು.