77ನೇ ಸ್ವಾತಂತ್ರ್ಯ ದಿನಾಚರಣೆ

ಕಲಬುರಗಿ,ಆ.15-ನವ ಕಲ್ಯಾಣ ಕರ್ನಾಟಕ ಬೀದಿ ವ್ಯಾಪಾರಿಗಳ ಅಭಿವೃದ್ಧಿಪರ ಸಮಿತಿ ಆವರಣದಲ್ಲಿ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಶಾಸಕ ಅಲ್ಲಮಪ್ರಭು ಪಾಟೀಲ, ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯ ಶೇಖ್ ಹುಸೇನ್, ಮುಖಂಡರಾದ ರಾಹುಲ್ ಸಿ.ಹೊನ್ನಳ್ಳಿ, ಪಾಲಿಕೆ ಡೇನಲ್ಮ್ ಅಧಿಕಾರಿ ಮಾಣಿಕ್, ನವ ಕಲ್ಯಾಣ ಕರ್ನಾಟಕ ಬೀದಿ ವ್ಯಾಪಾರಿಗಳ ಅಭಿವೃದ್ಧಿಪರ ಹೋರಾಟ ಸಮಿತಿ ಅಧ್ಯಕ್ಷ ಸಾಬೀರ್ ಅಲಿ, ಟಿಸಿಸಿ ಸದಸ್ಯ ಧರ್ಮಣ್ಣ ನಾಟಿಕರ, ಸೂರ್ಯಕಾಂತ, ಪದಾಧಿಕಾರಿಗಳಾದ ಶಾಂತಪ್ಪ ಎಸ್.ಹೆಳವರ, ಸಂಜು, ಮನಾರುಫ್ ಕೊತ್ವಾಲ್, ಶ್ರೀಶೈಲ್ ಹೊನ್ನಳ್ಳಿ, ರಫಿಕ್ ಪಟೇಲ್, ಸುರಲ್ ಸಾವಂತ್, ಜುನೈದ್, ಪ್ರಲ್ಹಾದ ಅಯ್ಯಳಕರ, ಸಿದ್ದು ದೇವರಮನಿ, ಸಿದ್ದರಾಮ ಟಿ.ಭೈರಾಮಡಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.