77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೈಕ್ ರ್ಯಾಲಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.17:- ದೇಶದ77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ರೀಡಂ ಆನ್ ವೀಲ್ಸ್ ಘೋಷವಾಕ್ಯದಡಿ ಬೈಕ್ ರ್ಯಾಲಿ ನಡೆಸಲಾಯಿತು.
ಕರ್ನಾಟಕ ಟ್ರೆಕಿಂಗ್ಸ್‍ರವರು ನೆಕ್ಸಸ್ ಮಾಲ್, ಗಲ್ರ್ಸ್ ಆನ್‍ಗೇರ್, ಗೋನ ಮಾಡ್ಸ್ ಹಾಗೂ ನೆಕ್ಸಸ್ ಮಾಲ್, ಸುದ್ದಿನಾಡು, ಗಲ್ಸ್‍ಆನ್‍ಗೇರ್ಸ್, ಗೊನೊ ಮ್ಯಾಡ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಬೈಕ್‍ರ್ಯಾಲಿಯು ಮೈಸೂರು ನಗರದ ನೆಕ್ಸಸ್ ಮಾಲ್‍ನಿಂದ ತೆರಳಿ ಗುಂಡ್ಲುಪೇಟೆಯ ಕನಕಗಿರಿ ಬೆಟ್ಟದಲ್ಲಿ ಸಮಾಪ್ತಿಗೊಂಡಿತು.
ನಂತರ ಗುಂಡ್ಲುಪೇಟೆ ತಾಲ್ಲೂಕಿನ ಕನಕಗಿರಿ ಬೆಟ್ಟದ ಮೇಲೆ ಕನಕಗಿರಿ ಮಠದ ಸ್ವಾಮೀಜಿಯವರು ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚಾರಣೆ ಆಚರಣೆ ಮಾಡಲಾಯಿತು.
ಇದಕ್ಕೂ ಮೊದಲು ನೆಕ್ಸಸ್ ಮಾಲ್ ಆಪರೇಷನ್ ಇನ್ಚಾರ್ಜ್ ಮೋಹನ್ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಟ್ರಕ್ಕಿಂಗ್ಸ್‍ನ ಸಂಸ್ಥಾಪಕ ಶರತ್, ಮ್ಯಾನೇಜರ್ ಆದಿ ಹಸಗೂಲಿ, ಗಲ್ರ್ಸ್‍ಆನ್‍ನ ಅಪರ್ಣಚೌಧರಿ, ಗೋನೊ ಮ್ಯಾಡ್ಸ್‍ನ ಸಂಸ್ಥಾಪಕ ಹರ್ಷಿತ್ ಸೇರಿ ಹಲವಾರು ಹಾಜರಿದ್ದರು.
ರ್ಯಾಲಿಯಲ್ಲಿ ಐವತ್ತಕ್ಕೂ ಹೆಚ್ವು ಬೈಕರ್ಸ್ ಭಾಗವಹಿಸಿದ್ದರು.