77ನೇ ಸ್ವಾತಂತ್ರ್ಯೋತ್ಸವ ಆಚರಣೆ

(ಸಂಜೆವಾಣಿ ವಾರ್ತೆ)
ರಾಣೇಬೆನ್ನೂರು,ಆ20: ಭಾರತ ದೇಶ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ. ನಾವು ಭಾರತ ದೇಶದ ಪ್ರಜೆಗಳಾಗಿ ಪ್ರತಿಯೊಬ್ಬರು ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಬೇಕು ಎಂದು ಎಸ್.ಎಂ.ಸೀತಾಳದ ತಿಳಿಸಿದರು.
ನಗರದ ಹುಣಸೀಕಟ್ಟಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಬಸವರಾಜ ಹುಗ್ಗಿ ಮಾತನಾಡಿ ನಮಗೆ ಸಂವಿಧಾನ ನೀಡಿರುವ ಕರ್ತವ್ಯಗಳನ್ನು ಚಾಚುತಪ್ಪದೇ ಪಾಲಿಸಬೇಕು ಎಂದರು.
ಅರುಣಕುಮಾರ ಚಂದನ್ ಮಾತನಾಡಿ, ದೇಶವನ್ನು ಪರಕೀಯರ ಬಂಧನದಿಂದ ಬಿಡಿಸಲು ಸ್ವಾತಂತ್ರ್ಯ ಹೋರಾಟಗಾರರು ಮಾಡಿರುವ ತ್ಯಾಗ, ಬಲಿದಾನಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರಾಂಶುಪಾಲರಾದ ಡಾ.ಎಸ್.ಕೆ. ಪಾಟೀಲ ಅವರು ಧ್ಜಜಾರೋಹಣೆ ಮಾಡಿದರು. ಡಾ.ಶೋಭಾ ಸಾವಕಾರ, ಡಾ. ವೆಂಕಟೇಶ್ ಎಚ್., ವಿ.ಬಿ.ಕುಂಬಾರ, ವಿದ್ಯಾರ್ಥಿ ಆರ್ಫಾ ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು.
ಡಾ. ರಾಘವೇಂದ್ರ ಕೆ. ಸುವ್ಯವಸ್ಥಿತವಾಗಿ ನಡೆಸಿಕೊಟ್ಟರು. ಈ ಮುಂಚೆ ಮಹಾತ್ಮ ಗಾಂಧಿ ಹಾಗೂ ಡಾ. ಅಂಬೇಡ್ಕರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿರಿದ್ದರು.