77ನೇ ಸ್ವಾತಂತ್ರೋತ್ಸವ ದಿನಾಚರಣೆ ಸಿದ್ಧತೆ: ಬಿಗಿ ಭದ್ರತೆ

ಕೋಲಾರ,ಆ,೧೪- ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ೭೭ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆ,೧೫ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಕಲ ಸಿದ್ದತೆಗಳನ್ನು ಮಾಡಿ ಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು,
ನಗರದ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಅವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕರ್ನಾಟಕ ರಾಜ್ಯದ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಅವರು ಧ್ವಜಾರೋಹಣ ನೆರವೇರಿಸುವರು. ಕೋಲಾರದ ಶಾಸಕ ಡಾ.ಕೊತ್ತೊರು ಜಿ.ಮಂಜುನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ನಸ್ಸೀರ್ ಆಹ್ಮದ್, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸರ್ಕಾರದ ಕಾರ್ಯದರ್ಶಿ ಡಾ.ಏಕ್ ರೂಪ್ ಕೌರ್ ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸುವರು ಎಂದರು ತಿಳಿಸಿದರು.
ಧ್ವಜಾರೋಹಣ,ರಾಷ್ಟ್ರಗೀತೆ,ಸಚಿವರಿಂದ ಗೌರವ ರಕ್ಷೆ ಸ್ವೀಕಾರ, ಪಥ ಸಂಚಲನ,ಸಚಿವರಿಂದ ಸ್ವಾತಂತ್ರೋತ್ಸವ ಸಂದೇಶ, ಶಾಲ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ನಂತರ ಸಂಜೆ ೫ ಗಂಟೆ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಹುಮಾನ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು,
ವಿಶೇಷವಾಗಿ ಸಾರ್ವಜನಿಕರ ಗಮನಕ್ಕೆ ತಿಳಿಸುವುದೆನೆಂದರೆ ಪ್ರತಿ ವರ್ಷವೂ ಅಂತರಗಂಗೆ ರಸ್ತೆಯಲ್ಲಿನ ಸರ್.ಎಂ. ವಿಶೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿತ್ತು, ಅದರೆ ಈ ಬಾರಿ ಕ್ರೀಡಾಂಗಣದಲ್ಲಿ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬುವುದು ಅರಿಯ ಬೇಕಾಗಿದೆ ಎಂದು ಹೇಳಿದರು,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾತನಾಡಿ ಕಾರ್ಯಕ್ರಮವು ಬೆಳಿಗ್ಗೆ ೯ ಗಖಟೆಗೆ ನಿಗಧಿಯಾಗಿದ್ದು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಬೆಳಿಗ್ಗೆ ೮.೩೦ಕ್ಕೆ ಅಗಮಿಸಿ ಅಸೀನರಾಗ ಬೇಕು ಎಂದರು,
ಈ ಭಾರಿ ವಿಶೇಷ ಭದ್ರತಾ ವ್ಯವಸ್ಥೆಯ ಹಿನ್ನಲೆಯಲ್ಲಿ ಪ್ರಮುಖವಾಗಿ ಸಂಖ್ಯೆ೧,ಸಂಖ್ಯೆ೨,ಸಂಖ್ಯೆ೩ ರಂತೆ ವಿಶೇಷವಾದ ೩ ಪ್ರವೇಶ ದ್ವಾರಗಳನ್ನು ವಿಭಜಿಸಲಾಗಿದೆ. ಹಳೆ ಬಸ್ ನಿಲ್ದಾಣ ಮತ್ತು ಬಂಗಾರಪೇಟೆ ರಸ್ತೆಯಲ್ಲಿನ ಕಾಲೇಜಿನ ಮುಖ್ಯದ್ವಾರದಲ್ಲಿ ಪ್ರವೇಶ ಸಂಖ್ಯೆ ೧ ಎಂದು ಗುರುತಿಸಲಾಗಿದ್ದು ಅಧಿಕಾರಿಗಳು ಮತ್ತು ಮಾದ್ಯಮದವರಿಗೆ, ಉಪಕಾರಗೃಹದ ಪಕ್ಕದ ರಸ್ತೆಯನ್ನು ಪ್ರವೇಶ ದ್ವಾರದ ಸಂಖ್ಯೆ ೨ ಅಗಿದ್ದು ಸಾರ್ವಜನಿಕರು, ಶಾಲಾ ಮಕ್ಕಳು, ಕುರುಬರಪೇಟೆ ಮುಖ್ಯ ರಸ್ತೆಯಲ್ಲಿನ ಬ್ಯಾಸ್ಕೆಟ್ ಬಾಲ್ ಗ್ರೌಂಡ್ ಪಕ್ಕದಲ್ಲಿ ಪ್ರವೇಶದ್ವಾರ ಸಂಖ್ಯೆ ೩ ಅಗಿದ್ದು, ಮುಖ್ಯ ಅತಿಥಿಗಳಿಗೆ ಮಾತ್ರ ಈ ಪ್ರವೇಶ ಮಾರ್ಗವನ್ನು ಮೀಸಲಿರಿಸಲಾಗುವುದು ಎಂದು ತಿಳಿಸಿದರು,
ಪ್ರವೇಶದ್ವಾರ ೧ ರಲ್ಲಿ ಪ್ರವೇಶಿಸುವವರಿಗೆ ಆಹ್ವಾನ ಪತ್ರಿಕೆ ಪಾಸ್‌ಗಳನ್ನು ಒಳಗೊಂಡವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು, ಪ್ರವೇಶ ದ್ವಾರ ೨ರಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಉಂಟು, ಪ್ರವೇಶ ದ್ವಾರ ೩ ರಲ್ಲಿ ಮುಖ್ಯ ಅತಿಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಿದೆ. ಸಾರ್ವಜನಿಕರು, ನೀರಿನ ಬಾಟಲ್, ಕ್ಯಾಮೆರ, ಮೊಬೈಲ್, ರೇಡಿಯೋ, ಕೈಚೀಲ,ಛತ್ರಿ, ಯಾವೂದೇ ಕಪ್ಪು ಬಣ್ಣದ ಕ್ಯಾಪ್, ಕಪ್ಪು ಬಣದ ಮಾಸ್ಕ್ ಧರಿಸುವುದನ್ನು, ಕಪ್ಪು ಬಣ್ಣದ ಬಟ್ಟೆಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದರು.
ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಕೋಲಾರಮ್ಮ ದೇವಾಲಯ ಮುಂಭಾಗ, ನಚಿಕೇತನ ನಿಲಯ ಅವರಣ, ಮೆಥೋಡಿಸ್ಟ್ ಕಾಲೇಜಿನ ಅವರಣ ಕಾರ್ ಸ್ಟಾಂಡ್ ಬಳಿ ನಿಲುಗಡೆ ಮಾಡ ಬೇಕು, ಪ್ರವೇಶದ್ವಾರಗಳ ಬಳಿ ಭದ್ರತಾದೃಷ್ಠಿಯಿಂದ ತಪಾಸಣೆ ಮಾಡುವುದಕ್ಕೆ ಎಲ್ಲರೂ ಸಹಕಾರ ನೀಡ ಬೇಕೆಂದು ತಿಳಿಸಿದರು,
ಪೆರೇಡ್ ನಡೆಯುವ ಸಂದರ್ಭದಲ್ಲಿ ಮೊಬೈಲ್‌ನಿಂದ ಸೆರೆ ಹಿಡಿಯುವುದನ್ನು ನಿಶೇಧಿಸಲಾಗಿದ್ದು, ಮಾಧ್ಯಮಗಳ ದೊಡ್ಡ ಕ್ಯಾಮೆರಾಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಮೈದಾನದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದ ಹೊಂದಿ ಕೊಳ್ಳುವ ಮೂಲಕ ಸಹಕಾರ ನೀಡಬೇಕು, ಪ್ಲಾಸ್ಟಿಕ್ ಧ್ವಜಗಳನ್ನು ನಿಶೇಧಿಸಲಾಗಿದೆ. ೨೫ ಸಾವಿರ ಬಟ್ಟೆ ಬಾವುಟಗಳನ್ನು ಮಾಡಿಸಲಾಗಿದೆ. ಪೇರೇಡ್‌ನಲ್ಲಿ ೨೫ ತಂಡಗಳು ಭಾಗವಹಿಸಲಿದೆ. ಅತ್ಯೂತ್ತಮ ೩ ಶಾಲೆಗಳಿಗೆ ಬಹುಮಾನ ಘೋಷಿಸಲಾಗುವುದು , ೧೦೦ ಮಂದಿ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದ ಉಸ್ತುವಾಗಿ ವಹಿಸಲಿದ್ದಾರೆ. ಅಗ್ನಿಶಾಮಕ ದಳ, ಅಂಬ್ಯೂಲೆನ್ಸ್‌ಗಳು ಮುನ್ನೆಚ್ಚರಿಕ ಕ್ರಮವಾಗಿ ಸ್ಥಳದಲ್ಲಿ ಹಾಜರಿರುತ್ತದೆ. ಸುಮಾರು ೫ ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗುವುದು ಎಂದರು.