77ನೇ ಸ್ವಾತಂತ್ರೋತ್ಸವ ಆಚರಣೆ

ಧಾರವಾಡ, ಆ15: ಕೆ. ಎಲ್. ಎಸ್. ವಿ. ಡಿ. ಐ. ಟಿ. ಹಳಿಯಾಳದಲ್ಲಿ 77ನೇ ಸ್ವಾತಂತ್ರೋತ್ಸವ ವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಚಾರ್ಯರಾದ ಡಾ. ವಿ. ಎ. ಕುಲಕರ್ಣಿ ಅವರು ಧ್ವಜಾರೋಹಣ ಮಾಡಿ ಮಾತನಾಡುತ್ತ, ಭಾರತವನ್ನು ಬ್ರಿಟೀಷರಿಂದ ಸ್ವತಂತ್ರಗೊಳಿಸಲು ಹೋರಾಡಿ ಮಡಿದವರ ತ್ಯಾಗ ವನ್ನು ಸ್ಮರಿಸಿದರು. ಸ್ವಾತಂತ್ರವನ್ನು ದೇಶದ ಅಭಿವೃದ್ಧಿಗೆ ಬಳಸಿ, ಭಾರತವನ್ನು ಸಂಪೂರ್ಣ ಸ್ವಾವಲಂಬಿ ದೇಶವನ್ನಾಗಿಸೋಣ ಎಂದರು. ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಗಳು ಒಗ್ಗಟಿನಿಂದ ಶ್ರಮಿಸಿ ಉತ್ತಮ ನಾಗರೀಕ ಅಭಿಯಂತರರನ್ನು ದೇಶಕ್ಕೆ ಕೊಡುಗೆ ನೀಡಿ ದೇಶವನ್ನು ಉನ್ನತಿಯತ್ತ ಕೊಂಡೋಯ್ಯೊಣ ಎಂದು ಹೇಳಿದರು.
ಸ್ವಾತಂತ್ರದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ನಿಬಂಧ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಪುರಸ್ಕರಿಸಲಾಯಿತು. ನಿಬಂಧ ಸ್ಪರ್ಧೆ ಯಲ್ಲಿ ಕುಮಾರಿ. ಅನುಶ್ರೀ, ಚಿತ್ರಕಲಾ ಸ್ಪರ್ಧೆಯಲ್ಲಿ ಕು. ಸಿದ್ದಾರ್ಥ ಪ್ರಥಮ ಸ್ಥಾನ ಗಳಿಸಿದರು. ಸ್ವಾತಂತ್ರೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು, ಬೋಧಕ ಭೋದಕೇತರ ಸಿಬ್ಬಂದಿಗಳು ದೇಶ ಭಕ್ತಿ ಗೀತೆಯನ್ನು ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ವಿದ್ಯಾಲಯದ ಎಲ್ಲಾ ಬೋಧಕ ಭೋದಕ್ಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೆÇ್ರ ಸಂತೋಷ್ ಸವಣೂರ ಮತ್ತು ಗದಿಗೆಪ್ಪಾ ಎಳ್ಳುರ್ ಕಾರ್ಯಕ್ರಮ ಸಂಯೋಜಿಸಿದರು.